ರಾಷ್ಟ್ರ ಸುದ್ದಿ

15 ಮಿತ್ರರಿಗಾಗಿ ಸರಕಾರ ನಡೆಸುತ್ತಿರುವ ಪ್ರಧಾನಿ ಮೋದಿ: ರಾಹುಲ್‌ ವಾಗ್ದಾಳಿ

ಕೃಷ್ಣಗಿರಿ(ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ತನ್ನ 15 ಮಿತ್ರರಿಗಾಗಿ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಭಾರಿ ಮೊತ್ತದ ಸಾಲಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್‌ ಮಲ್ಯಾ, ನೀರವ್‌ ಮೋದಿ ಅವರಂತಹವರು ಯಾಕೆ ಇನ್ನು ಜೈಲು ಸೇರಿಲ್ಲ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ ಬ್ಯಾಂಕ್‌ ಸಾಲವನ್ನು ತೀರಿಸಲಾಗದ ರೈತರನ್ನು ಜೈಲಿಗೆ ಕಳುಹಿಸುವುದಿಲ್ಲ. ಸಾಲ ತೀರಿಸದ ಶ್ರೀಮಂತರನ್ನು ಬಂಧಿಸದೆ ರೈತರನ್ನು ಜೈಲಿಗೆ ಹೋಗುವಂತೆ ಮಾಡುವುದು ಸರಿಯಲ್ಲ ಎಂದು ರಾಹುಲ್‌ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನೀರವ್‌ ಮೋದಿ ಅವರಿಗೆ 35,000 ಕೋಟಿ ರೂ. ಮತ್ತು ಮೆಹುಲ್‌ ಚೊಕ್ಸಿ ಅವರಿಗೆ 35,000 ಕೋಟಿ ರೂ. ಮತ್ತು ವಿಜಯ್‌ ಮಲ್ಯಾ ಅವರಿಗೆ 10,000 ಕೋಟಿ ರೂ. ನೀಡಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಕಳೆದ 5 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರು ತಮ್ಮ 15 ಮಿತ್ರರಿಗಾಗಿ ಸರಕಾರ ನಡೆಸಿದ್ದಾರೆ. ನರೇಂದ್ರ ಮೋದಿ ಅವರ ಮಿತ್ರರು ಯಾರು ಗೊತ್ತೆ? ಎಂದು ಪ್ರಶ್ನಿಸಿರುವ ರಾಹುಲ್‌ ಗಾಂಧಿ, ಮೂವರ ಹೆಸರು ಹೇಳಿದ್ದಾರೆ. ಅನಿಲ್‌ ಅಂಬಾನಿ, ಮೆಹುಲ್‌ ಚೊಸ್ಕಿ, ನೀರವ್‌ ಮೋದಿ ನರೇಂದ್ರ ಮೋದಿ ಅವರ ಮಿತ್ರರು ಎಂದು ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರದ ವೇಳೆ ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment