ರಾಷ್ಟ್ರ ಸುದ್ದಿ

1971ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪಾಕ್ ನೆಲಕ್ಕೆ ನುಗ್ಗಿದ ಲೋಹದ ಹಕ್ಕಿಗಳು

ನವದೆಹಲಿ: 1971ರ ಇಂಡೋ-ಪಾಕ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಯುದ್ಧ ವಿಮಾನ ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂತಿರುಗಿವೆ. ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಬರೋಬ್ಬರಿ ನಾಲ್ಕು ದಶಕಗಳ ನಂತರ ಭಾರತದ ಗಡಿಯಾಚೆ ರೆಕ್ಕೆ ಬಿಚ್ಚುವ ಅವಕಾಶ ಸಿಕ್ಕಿದೆ. ಇನ್ನು ಕಾರ್ಗಿಲ್ ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭ ಆಗಿದ್ದ ಸಂದರ್ಭದಲ್ಲೂ ವಾಯುಪಡೆಗೆ ಗಡಿ ದಾಟುವ ಅವಕಾಶವನ್ನು ಭಾರತ ಸರ್ಕಾರ ನೀಡಿರಲಿಲ್ಲ. ಆದರೆ ಈಗ ಬರೋಬ್ಬರಿ 40 ವರ್ಷಗಳ ಬಳಿಕ ಎಲ್ಒಸಿ ದಾಟಿದ ನಮ್ಮ ಲೋಹದ ಹಕ್ಕಿಗಳ ಪಾಕ್ ಗಡಿಯಲ್ಲಿ ಅವಿತಿದ್ದ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ. ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಉಗ್ರ ದಾಳಿ ನಡೆಸಿ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಹತ್ಯೆಗೈದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಇದೀಗ ಪಾಕಿಸ್ತಾನಕ್ಕೆ ನುಗ್ಗಿ ಹಲವು ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದೆ.

About the author

ಕನ್ನಡ ಟುಡೆ

Leave a Comment