ಕ್ರೀಡೆ

2ನೇ ಟೆಸ್ಟ್: ಕಾಂಗರೂಗಳು ಪತರುಗುಟ್ಟುವಂತೆ ಮಾಡಿದ್ದ ಶಮಿಯಿಂದ ವಿಶಿಷ್ಠ ದಾಖಲೆ

ಪರ್ತ್: ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ನ 2ನೇ ಇನ್ನಿಂಗ್ಸ್ ನಲ್ಲಿ ಆಸಿಸ್ ದಾಂಡಿಗರನ್ನು ಬಿಟ್ಟೂ ಬಿಡದೇ ಕಾಡಿದ್ದ ಭಾರತೀಯ ವೇಗಿ ಮಹಮದ್ ಶಮಿ ಇದೀಗ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ 56 ರನ್ ಗಳಿಗೆ 6 ವಿಕೆಟ್ ಕಬಳಿಸಿ ಕಾಂಗರೂಗಳು ಪತರುಗುಟ್ಟುವಂತೆ ಮಾಡಿದ್ದ ಶಮಿ, ತಮ್ಮ ವೃತ್ತಿ ಜೀವನದ ಶ್ರೇಷ್ಠ ನಿರ್ವಹಣೆ ತೋರಿದ್ದಾರೆ. ಅಲ್ಲದೆ ಆಸಿಸ್ ನೆಲದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ಶಮಿ ಪಾತ್ರರಾಗಿದ್ದಾರೆ. ಈ ಹಿಂದೆ 1985ರಲ್ಲಿ ಕಪಿಲ್ ದೇವ್ 106 ರನ್ ತೆತ್ತು ಎಂಟು ವಿಕೆಟುಗಳನ್ನು ಪಡೆದಿರುವುದು ಭಾರತೀಯ ಬೌಲರ್‌ನ ಅತ್ಯುತ್ತಮ ಪ್ರದರ್ಶನವಾಗಿದೆ.  2003ರಲ್ಲಿ ಅಜಿತ್ ಅಗರ್‌ಕರ್ (41/6) ಹಾಗೂ 1967ರಲ್ಲಿ ಅದಿಲ್ ಅಲಿ ನಂತರದ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಬಲಗೈ ಅನುಭವಿ ವೇಗಿ ಮೊಹಮ್ಮದ್ ಶಮಿ, ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟುಗಳನ್ನು ಕಬಳಿಸುವ ಮೂಲಕ ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆ ನೀಡಿದ್ದಾರೆ. ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ನಾಲ್ಕನೇ ಬಾರಿಗೆ ಶಮಿ ಐದು ವಿಕೆಟ್ ಗಳ ಸಾಧನೆ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment