ರಾಜ್ಯ ಸುದ್ದಿ

2 ವರ್ಷದ ಬಳಿಕ ವೃದ್ಧೆಯನ್ನು ಕುಟುಂಬದ ಮಡಿಲು ಸೇರಿಸಿದ ವೀರ ಯೋಧರು

ಹಾಸನ: ಯಾವ ಸಿನಿಮಾಗೂ ಕಡಿಮೆಯಿಲ್ಲದ ಕಥೆಯಿದು. 2 ವರ್ಷಗಳ ಹಿಂದೆ ಹಾಸನದಲ್ಲಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಅಸ್ಸಾಂನಲ್ಲಿ ಪತ್ತೆಯಾಗಿದ್ದು, ರೋಚಕ ಪ್ರಯಾಣ ನಡೆಸಿದ್ದ ಈಕೆಯನ್ನು ದೇಶದ ಗಡಿ ಕಾಯುವ ಯೋಧರು ಕುಟುಂಬದ ಮಡಿಲು ಸೇರಿಸಿದ್ದಾರೆ. ಹಾಸನ ಜಿಲ್ಲೆಯ ಮಾದಿಗಾನಹಳ್ಳಿ ಗ್ರಾಮ ಮೂಲದ ಜಯಮ್ಮ ಎಂಬ ಮಹಿಳೆ 2 ವರ್ಷಗಳ ಹಿಂದೆ ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಇದಾದ ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಜಯಮ್ಮ ಅವರಿಗಾಗಿ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಎಲ್ಲಿಯೂ ಜಯಮ್ಮ ಸಿಕ್ಕಿರಲಿಲ್ಲ. ಅಕ್ಟೋಬರ್ 18ರ ಬೆಳಿಗ್ಗೆ 5.30ರ ಸುಮಾರಿಗೆ ಮಹಿಳೆಯೊಬ್ಬರು ಕರೀಂಗಂಜ್’ನ ಸುತಾರ್ಕಂಡಿಯಲ್ಲಿರುವ ಗಡಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು. ಮಹಿಳೆಯ ಭಾಷೆ ಯೋಧರಿಗೆ ಅರ್ಥವಾಗಿಲ್ಲ. ಮಹಿಳೆ ದಕ್ಷಿಣ ಭಾರತದ ಭಾಷೆ ಮಾತನಾಡುತ್ತಿರುವುದು ಯೋಧರಿಗೆ ತಿಳಿದಿದೆ.

ಮಹಿಳೆ ಬಳಿ ತೆರಳಿ, ನೀವು ಎಲ್ಲಿಯವರು? ಎಲ್ಲಿಂದ ಬಂದಿದ್ದೀರಿ ಎಂದು ಯೋಧರು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ಕನ್ನಡದಲ್ಲಿ ಅವರಷ್ಟಕ್ಕೆ ಅವರೇ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಬಳಿಕ ಯೋಧರು ನನ್ನ ಬಳಿಕೆ ಕರೆದುಕೊಂಡು ಬಂದಿದ್ದರು. ನಾನು ಕರ್ನಾಟಕ ಮೂಲದವನೇ ಆಗಿದ್ದು, ಕನ್ನಡ ಭಾಷೆ ಬರುತ್ತದೆ. ಹೀಗಾಗಿ ಜಯಮ್ಮ ಅವರ ಬಳಿ ಮಾತನಾಡಿದೆ. ಈ ವೇಳೆ ಆಕೆ ಹಾಸನ ತಾಲೂಕಿನ ಮಾದಿಗಾನಹಳ್ಳಿಯ ಲಕ್ಷ್ಮೇಗೌಡರ ಹೆಂಡತಿ ಜಯಮ್ಮ ಎಂಬುದು ತಿಳಿದುಬಂದಿತ್ತು. ಬಳಿಕ ಆಕೆಯನ್ನು ಕುಟುಂಬದ ಮಡಿಲು ಸೇರಿದೆ ಎಂದು ಯೋಧ ತಹಿಲ್ ಜಬೀವುಲ್ಲಾ ಅವರು ಹೇಳಿದ್ದಾರೆ.
ಮಹಿಳೆಯೊಬ್ಬರು ಪತ್ತೆಯಾಗಿರುವ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಾಹಿಲ್ ಅವರೊಂದಿಗೆ ಜಯಮ್ಮ ಮಾತನಾಡುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೇ ವೇಳೆ ಬಿಎಸ್ಎಫ್ ಕಮಾಂಡರ್ ಒಬ್ಬರು ಹಾಸನ ಪೊಲೀಸರನ್ನು ಸಂಪರ್ಕಿಸಿದ್ದರು. ಆಗ ಹಾಸನ ಪೊಲೀಸರು ಮಾದಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಎಂಬುವವರನ್ನು ಕರೆತಂದು ಜಯಮ್ಮ-ಸಂತೋಷ್ ಅವರ ಆನ್’ಲೈನ್ ವಿಡಿಯೋ ಸಂವಾದ ಏರ್ಪಡಿಸಿದರು. ಸಂತೋಷ್ ಅವರು ಈಕೆ ಜಯಮ್ಮನೇ ಎಂದು ಗುರುತು ಪತ್ತೆ ಮಾಡಿ, ಜಯಮ್ಮ ಅವರ ಪುತ್ರಿ ಸುನಂದಾ ಅವರಿಗೆ ವಿಷಯ ತಿಳಿಸಿದರು. ಬಳಿಕ ಬಿಎಸ್ಎಫ್ ಅಧಿಕಾರಿಗಳು ಸುನಂದಾ ಹಾಗೂ ಜಯಮ್ಮನ ವಿಡಿಯೋ ಸಂವಾದವನ್ನು ಏರ್ಪಡಿಸಿದರು. ಈಕೆ ನಮ್ಮ ಅಮ್ಮ ಎಂದು ಸುನಂದಾ ಅವರು ಖಚಿತಪಡಿಸಿದರು.
2016ರ ಡಿಸೆಂಬರ್ 25 ರಂದು ನನ್ನ ತಾಯಿ ಮನೆಬಿಟ್ಟು ಹೋಗಿದ್ದರು. ಈ ವೇಳೆ ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆ. ಆದರೆ, ಆಕೆ ಸಿಕ್ಕಿರಲಿಲ್ಲ. ನಾನು ಸಲಿಂಗಿಯಾಗಿದ್ದು, ಜನರು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದರು. ನನ್ನ ತಾಯಿ ಅಸ್ಸಾಂಗೆ ಹೇಗೆ ತಲುಪಿದರು ಎಂಬುದು ನನಗೆ ತಿಳಿಯುತ್ತಿಲ್ಲ. ಅದೃಷ್ಟವಶಾತ್ ಅವರು ಯೋಧರ ಕೈಗೆ ಸಿಕ್ಕಿದ್ದಾರೆಂದು ಜಯಮ್ಮ ಅವರ ಪುತ್ರಿ ಸುನಂದಾ ಅವರು ಹೇಳಿದ್ದಾರೆ. ನನ್ನ ತಾಯಿ ಮನೆ ಬಿಟ್ಟು ಹೋಗುವಾಗ ಅವರು 120 ಗ್ರಾಂ ಚಿನ್ನವನ್ನು ಹಾಕಿಕೊಕಂಡಿದ್ದರು. ಆದರೆ, ಕಳ್ಳರು ಅದನ್ನು ದೋಚಿತದ್ದಾರೆ. ಬಳಿಕ ಆಕೆ ಗಡಿಯವರೆಗೂ ನಡೆದು ಹೋಗಿದ್ದಾರೆ. ಹಲವೆಡೆ ಭಿಕ್ಷೆ ಬೇಡಿದ್ದೇನೆಂದು ತಾಯಿ ಹೇಳಿದ್ದಾರೆ. ಕೆಲವರು ಆಕೆಗೆ ಹಿಂಸೆ ನೀಡಿರುವುದು ಹಾಗೂ ತಲೆ ಕೂದಲನ್ನು ಕತ್ತರಿಸಿದ್ದಾರೆಂದು ಆಕೆ ಹೇಳಿಕೊಂಡಿದ್ದಾರೆ. ದೇವರ ದಯೆಯಿಂದ ನನ್ನ ತಾಯಿ ಸಿಕ್ಕಿದ್ದಾರೆ.

About the author

ಕನ್ನಡ ಟುಡೆ

Leave a Comment