ರಾಜಕೀಯ

20 ಕೋಟಿಗೂ ಹೆಚ್ಚು ಆಸ್ತಿಯ ಒಡೆಯನಾದರೂ, ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರಿಲ್ಲ

ಹೈದರಾಬಾದ್: 20 ಕೋಟಿ ರೂಗೂ ಅಧಿಕ ಆಸ್ತಿಯ ಒಡೆಯನಾದರೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ಸ್ವಂತಕ್ಕೊಂದು ಕಾರು ಕೂಡ ಇಲ್ಲವಂತೆ ಅರೆ ಇದು ನಾವು ಹೇಳುತ್ತಿರುವುದಲ್ಲ.. ಸ್ವತಃ ಅವರೇ ತಮಗೆ ಸ್ವಂತ ಕಾರಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಹೌದು.. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ನಾಮಪತ್ರ ಸಲ್ಲಿಕೆ ಮಾಡಿದರು. ಜಿ್ಲಾಧಿಕಾರಿ ಸ್ಮಿತಾ ಸಬರ್ವಾಲ್ ಅವರಿಗೆ ಕೆಸಿಆರ್ ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣೆ ಕುರಿತ ಪ್ರಮಾಣಪತ್ರವನ್ನೂ ಸಲ್ಲಿಕೆ ಮಾಡಿದರು. ಈ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿರುವ ಕೆಸಿಆರ್ ತಮ್ಮ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಸುಮಾರು 16 ಎಕರೆ ಕೃಷಿ ಭೂಮಿ ಇದ್ದು, ಸ್ವಂತ ಮನೆ ಇದೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತೆ ಕೆಸಿಆರ್ ಆಸ್ತಿ ಮೌಲ್ಯದಲ್ಲಿ ಸುಮಾರು 5.5 ಕೋಟಿ ರೂಗಳ ಆಸ್ತಿ ಮೌಲ್ಯ ಹೆಚ್ಚಾಗಿದ್ದು, ಅವರ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳಿವೆಯಂತೆ. 2014ರಲ್ಲಿ ಅವರು 15.95 ಕೋಟಿ ರೂಗಳ ಆಸ್ತಿ ಘೋಷಣೆ ಮಾಡಿದ್ದರು. ಇಷ್ಟೆಲ್ಲಾ ಇದ್ದರೂ ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರು ಇಲ್ಲವಂತೆ. ಅಚ್ಚರಿ ಎಂದರೆ ಅವರ ಪಕ್ಷದ ಚಿನ್ಹೆ ಕೂಡ ಕಾರೇ ಆಗಿದೆ. ಅಂತೆಯೇ ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ ನಿಮಿತ್ತ ಅವರು ನಡೆಸಿದ್ದ ಪ್ರತಿಭಟನೆಗಳಿಂದಾಗಿ ಕೆಸಿಆರ್ ಮೇಲೆ ಒಟ್ಟು 64 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ಇಂದೀಗ ಆ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

About the author

ಕನ್ನಡ ಟುಡೆ

Leave a Comment