ರಾಜ್ಯ ಸುದ್ದಿ

ಕರ್ನಾಟಕ ಬಜೆಟ್ 2019: 20 ಕೋಟಿ ವೆಚ್ಚದಲ್ಲಿ ಸಂವಿಧಾನ ಮ್ಯೂಸಿಯಂ

ಬೆಂಗಳೂರು: ರಾಜಕೀಯ ಬೆಳವಣಿಗೆಗಳು, ಬಿಜೆಪಿ ಸದಸ್ಯರ ಸಭಾತ್ಯಾಗದ ಬೆನ್ನಲ್ಲೇ ದೋಸ್ತಿ ಸರಕಾರದ ಎರಡನೇ ಬಜೆಟ್‌ ಅನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ (8-2-2019) ಮಂಡಿಸಿದರು.

ಇದರ ಬೆನ್ನಲ್ಲೇ ವಿಧಾನಸಭೆಯಲ್ಲಿ ಬಜೆಟ್‌ ಮಂಡನೆ ವೇಳೆ ನಾಟಕೀಯ ಬೆಳವಣಿಗೆಗೂ ಕಾರಣವಾಯಿತು. ಕುಮಾರಸ್ವಾಮಿ ಬಜೆಟ್‌ ಭಾಷಣ ಮಾಡುತ್ತಿದ್ದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ, ಧರಣಿ ನಡೆಸಿದರು. ಈ ಬಜೆಟ್‌ ಮಂಡನೆ ನಮಗೆ ಸೂಕ್ತ ಎನಿಸುತ್ತಿಲ್ಲ. ಬಜೆಟ್‌ ಪುಸ್ತಕವನ್ನು ನೀಡದೇ ಸಂಪ್ರದಾಯ ಮುರಿಯಲಾಗಿದೆ. ಬಜೆಟ್‌ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಬಿಜೆಪಿ ಸದಸ್ಯರು ಯಡಿಯೂರಪ್ಪ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. ಇದರ ನಡುವೆಯೂ ಕುಮಾರಸ್ವಾಮಿ ತಮ್ಮ ಬಜೆಟ್‌ ಭಾಷಣ ಮುಂದುವರಿಸಿದರು.

ಇದೇ ಮೊದಲ ಬಾರಿಗೆ ಬಜೆಟ್‌ ಪ್ರತಿಗಳನ್ನು ವಿತರಣೆ ಮಾಡಲಾಗಿಲ್ಲ. ಹಣಕಾಸು ಸಚಿವರು ಬಜೆಟ್‌ ಭಾಷಣ ಮುಗಿಸಿದ ನಂತರ ಪ್ರತಿಗಳನ್ನು ಎಲ್ಲರಿಗೂ ಹಂಚಬೇಕು ಎಂದು ವಿಧಾನಸಭಾಧ್ಯಕ್ಷರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

About the author

ಕನ್ನಡ ಟುಡೆ

Leave a Comment