ರಾಷ್ಟ್ರ ಸುದ್ದಿ

20 ವರ್ಷದಲ್ಲಿ ಈತ ಕದ್ದಿದ್ದು 1,500 ಬೈಕ್‌ಗಳು

ವಡೋದರ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಿ ಸಿಕ್ಕಿಬಿದ್ದ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಗುಜರಾತ್‌ನ ವಡೋದರದಲ್ಲಿ ಸಿಕ್ಕಿಬಿದ್ದ ಕಳ್ಳನೋರ್ವ ಪೊಲೀಸರು ವಿಚಾರಣೆಯ ವೇಳೆ ಕಳೆದ 20 ವರ್ಷದಲ್ಲಿ ಸುಮಾರು 1,500 ಬೈಕ್‌ಗಳನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದಾನೆ.

50 ವರ್ಷದ ಅರವಿಂದ ಕುಮಾರ್ ಜಯಂತಿಲಾಲ್ ವ್ಯಾಸ್,ಬೈಕ್‌  ಕಳ್ಳತನವನ್ನು ಬಿಡಬೇಕೆಂದೆರೂ ಬಿಡಲಾಗುತ್ತಿಲ್ಲವಲ್ಲವಂತೆ.. 1996ರಿಂದ ಆತ ಕಳ್ಳತನ ಮಾಡಲಾರಂಭಿಸಿದ್ದಾನೆ. ಹಿಂದೊಮ್ಮೆ ಕಳ್ಳತನ ಬಿಟ್ಟು ಬೇರೇನಾದರೂ ಕೆಲಸ ಮಾಡಿ ಬದುಕೋಣವೆಂದರೆ ಅದನ್ನು ಸಮಾಜ ಒಪ್ಪಲಿಲ್ಲ. ಆತನನ್ನು ಪ್ರತ್ಯೇಕವಾಗಿ ನೋಡಲಾರಂಭಿಸಿತು. ಹೀಗಾಗಿ ಆತ ಮತ್ತೆ ಕಳ್ಳತನಕ್ಕೆ ಇಳಿಯಬೇಕಾಯಿತು.

ಕಳೆದ ದೀಪಾವಳಿಯಲ್ಲಿ ಹಿಂದಿನ ಕಳ್ಳತನ ಪ್ರಕರಣದಲ್ಲಿ ಬೇಲ್ ಪಡೆದು ಹೊರಬಂದ ಬಳಿಕ ಸುಮ್ಮನಿರಲಾರದೆ 19 ಬೈಕ್‌ಗಳನ್ನು ವ್ಯಾಸ್ ಕಳ್ಳತನ ಮಾಡಿದ್ದಾನೆ.

ಬಳಿಕ ಅವುಗಳನ್ನು ಕೆಲವೊಮ್ಮೆ ಮಾರಾಟ ಮಾಡುತ್ತಿದ್ದ. ಇಲ್ಲವೆ ಬಿಡಿಭಾಗ ಮಾರಾಟ ಮಾಡುತ್ತಿದ್ದ, ಮಾರಾಟ ಮಾಡಲಾಗದ ಬೈಕ್‌ಗಳನ್ನು ಹಾಗೆಯೇ ಬಿಟ್ಟುಬಿಡುತ್ತಿದ್ದ. ಇಲ್ಲವೇ ಯಾರಿಗಾದರೂ ಬಳಸಲು ಕೊಡುತ್ತಿದ್ದ. ವ್ಯಾಸ್ ಬಳಿ ಹಲವು ಬೈಕ್ ಕೀಗಳಿದ್ದು, ಅದನ್ನು ಬಳಸಿ ಯಾವುದಾದರೂ ಬೈಕ್ ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment