ರಾಷ್ಟ್ರ ಸುದ್ದಿ

2008 ಅಸ್ಸಾಂ ಸ್ಫೋಟ ಪ್ರಕರಣ: ಎನ್ ಡಿಎಫ್ ಬಿ ನಾಯಕ ಸೇರಿ 10 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

ಗುವಾಹಟಿ: 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಾದ ಬೊಡೊಲ್ಯಾಂಡ್ ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಬಣ(ಎನ್ ಡಿಎಫ್ ಬಿ)ದ ಮುಖ್ಯಸ್ಥ ರಂಜನ್ ದೈಮರಿ ಮತ್ತು ಇತರ 9 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಂದು ಅಂತಿಮ ತೀರ್ಪಿನ ವಿಚಾರಣೆಯಿದ್ದುದರಿಂದ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪ್ರಕರಣದ ಆರೋಪಿಗಳಾದ ರಂಜನ್ ದೈಮರಿ, ಜಾರ್ಜ್ ಬೊಡೊ, ಬಿ ತರೈ, ರಾಜು ಸರ್ಕಾರ್, ಅಂಚೈ ಬೊಡೊ, ಇಂದ್ರ ಬ್ರಹ್ಮ, ಲೊಕೊ ಬಾಸುಮತರಿ, ಖರ್ಗೇಶ್ವರ ಬಸುಮತಲಿ, ಅಜಯ್ ಬಸುಮತರಿ ಮತ್ತು ರಾಜೇನ್ ಗೊಯರಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಇತರ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರ ಬ್ರಹ್ಮ ಅವರಿಗೆ ದಂಡ ವಿಧಿಸಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಲಿದೆ. ಈಗಾಗಲೇ ಶಿಕ್ಷೆಯ ಅವಧಿ ಪೂರ್ಣಗೊಳಿಸಿರುವ ನಿಲಿಮ್ ಡೈಮರಿ ಮತ್ತು ಮೃದುಲ್ ಗೊಯರಿ ಅವರನ್ನು ಬಿಡುಗಡೆ ಮಾಡುವಂತೆ ಸಿಬಿಐ ನ್ಯಾಯಾಲಯ ಆದೇಶ ನೀಡಿದೆ. ಕಳೆದ ಸೋಮವಾರ ಡೈಮರಿ ಮತ್ತು ಇತರ 14 ಮಂದಿ ಆರೋಪಿಗಳೆಂದು ತೀರ್ಮಾನಿಸಲಾಗಿತ್ತು. 2008ರ ಅಕ್ಟೋಬರ್ 30ರಂದು ಎನ್ ಡಿಎಫ್ ಬಿ ಗುವಾಹಟಿ, ಕೊಕ್ರಜ್ಹರ್ ಗಳಲ್ಲಿ ತಲಾ 3, ಬರ್ಪೆಟಾ ಮತ್ತು ಬೊಂಗೈಗೌನ್ ನಲ್ಲಿ ತಲಾ ಒಂದೊಂದು ಬಾಂಬ್ ಗಳನ್ನು ಇರಿಸಲಾಗಿತ್ತು. ಘಟನೆಯಲ್ಲಿ 88 ಮಂದಿ ಮೃತಪಟ್ಟು 540 ಮಂದಿ ಗಾಯಗೊಂಡಿದ್ದರು.

About the author

ಕನ್ನಡ ಟುಡೆ

Leave a Comment