ರಾಷ್ಟ್ರ ಸುದ್ದಿ

2017 ಎಸ್ ಎಸ್ ಸಿ ಪರೀಕ್ಷೆ ರದ್ದುಗೊಳಿಸಲು ಸುಪ್ರೀಂ ಒಲವು : ಮರು ಪರೀಕ್ಷೆ ನಡೆಯುವ ಸಾಧ್ಯತೆ

ನವದೆಹಲಿ:  2017ರಲ್ಲಿ ನಡೆದಿದ್ದ ಸ್ಟಾಪ್ ಸೆಲೆಕ್ಷನ್ ಕಮೀಷನ್ – ಎಸ್ ಎಸ್ ಸಿ ಪರೀಕ್ಷೆ  ಫಲಿತಾಂಶ ಪ್ರಕಟಣೆಗೆ ಆಗಸ್ಟ್ ನಲ್ಲಿ ತಡೆ ನೀಡಿದ್ದ  ಸುಪ್ರೀಂಕೋರ್ಟ್ , ಪರೀಕ್ಷೆ ರದ್ದುಗೊಳಿಸುವ ಬಗ್ಗೆ  ಒಲವು ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಥವಾ ಸಿಬಿಎಸ್ ಸಿಯಿಂದ ಮರು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡ ಸುಪ್ರೀಂಕೋರ್ಟ್, ಇದನ್ನು ರದ್ದುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಎಸ್ ಎಸ್ ಸಿಯ ಪದವೀಧರ ಮಟ್ಟದ ಪರೀಕ್ಷೆ  ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಉದ್ಯೋಗಾಕಾಂಕ್ಷಿಗಳಿಂದ ಅನೇಕ ದಿನಗಳ ಬೃಹತ್ ಪ್ರತಿಭಟನೆ ನಡೆದಿತ್ತು.ಪ್ರತಿಭಟನೆ ನಡುವೆ  ಪ್ರಶ್ನೆ ಪತ್ರಿಕೆ  ಆರೋಪ ಕುರಿತು ಸಿಬಿಐ ತನಿಖೆಗೆ ಎಸ್ ಎಸ್ ಸಿ ಶಿಫಾರಸ್ಸು ಮಾಡಿತ್ತು.ನ್ಯಾಯಾಧೀಶರಾದ ಎಸ್ ಎ ಬೊಬ್ಡೆ ಹಾಗೂ ಎಲ್ . ನಾಗೇಶ್ವರರಾವ್ ಅವರಿದ್ದ ದ್ವಿಸದಸ್ಯ ಪೀಠ, ಕೇಂದ್ರಸರ್ಕಾರದಿಂದ ವರದಿ ಕೇಳಿದ್ದು, ನವೆಂಬರ್ 113 ರೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹೊಸದಾಗಿ ಮರು ಪರೀಕ್ಷೆ ನಡೆಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದೆ.ಸಿಬ್ಬಂದಿ ನೇಮಕಾತಿ ಆಯೋಗ ಪದವೀಧರ ಹಾಗೂ ಪ್ರೌಢ ಶಿಕ್ಷಣ ಮಟ್ಟದ ಪರೀಕ್ಷೆಯನ್ನು 2017ರಲ್ಲಿ  ನಡೆಸಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ಆಗಸ್ಟ್ 31 ರಂದು ತಡೆ ನೀಡಿತ್ತು.

About the author

ಕನ್ನಡ ಟುಡೆ

Leave a Comment