ರಾಜ್ಯ ಸುದ್ದಿ

2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಎಚ್‌.ಎಲ್‌. ದತ್ತು, ದೊಡ್ಡಣ್ಣ ಸೇರಿ 63 ಸಾಧಕರಿಗೆ ಗರಿ

ಬೆಂಗಳೂರು: ಕಡೆಗೂ 2018 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರಕಾರ ಬುಧವಾರ ಪ್ರಕಟಿಸಿದ್ದು, ನಿವೃತ್ತ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಸೇರಿದಂತೆ 63 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ನವೆಂಬರ್‌ 1 ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಉಪ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಪ್ರಶಸ್ತಿ ನೀಡುತ್ತಿಲ್ಲವೆಂದು ಸರಕಾರ ಹೇಳಿಕೊಂಡಿತ್ತು. ಆ ಬಳಿಕವೂ ಪ್ರಶಸ್ತಿ ಪುರಸ್ಕೃತರ ಹೆಸರು ಅಂತಿಮಗೊಳಿಸುವುದು ವಿಳಂಬದ ಹಾದಿ ಹಿಡಿದಿತ್ತು.

ಈ ಮಧ್ಯೆ ನವೆಂಬರ್‌ 27 ರಂದು ಪ್ರಶಸ್ತಿ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿತ್ತು. ಅಂಬರೀಶ್‌, ಜಾಫರ್‌ ಷರೀಫ್‌ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಜಾರಿಯಲ್ಲಿ ಇದ್ದದ್ದರಿಂದ ಈ ಸಮಾರಂಭ ಪುನಃ ಮುಂದೂಡಿಕೆಯಾಗುವಂತಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯೊಂದಿಗೆ ಈ ಗೌರವಕ್ಕೆ ಭಾಜನರಾದವರ ಜಿಲ್ಲೆಯ ವಿವರ ನೀಡುವುದು ರೂಢಿ. ಈ ಬಾರಿ ಸಂಸ್ಕೃತಿ ಇಲಾಖೆ ಈ ಮಾಹಿತಿಯನ್ನು ಒದಗಿಸಿಲ್ಲ.

 

About the author

ಕನ್ನಡ ಟುಡೆ

Leave a Comment