ರಾಜ್ಯ ಸುದ್ದಿ

2019ಕ್ಕೆ ಸಿದ್ದರಾಮಯ್ಯ ಪ್ರಧಾನಿ ಆಗಲಿದ್ದಾರೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ

ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳುವ ಭರದಲ್ಲಿ ಸ್ವಪಕ್ಷ ಹಾಗೂ ದೋಸ್ತಿ ಪಕ್ಷವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಿದ್ದರಾಮಯ್ಯ ಆಪ್ತ ಮಳವಳ್ಳಿ ಶಿವಣ್ಣ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 2019ಕ್ಕೆ ಸಿದ್ದರಾಮಯ್ಯ ಅವರು ದೇಶದ ಪ್ರಧಾನಿ ಆಗಲಿದ್ದಾರೆ. ಇಡೀ ದೇಶದಲ್ಲಿ 14 ಕೋಟಿ ಕುರುಬ ಸಮುದಾಯದವರಿದ್ದಾರೆ. ಅವರೆಲ್ಲ ಒಗ್ಗಟ್ಟಾದರೆ ಸಿದ್ದರಾಮಯ್ಯ ಪ್ರಧಾನಿ ಆಗುವುದು ಖಚಿತ. 1998 ರಲ್ಲಿ ಸಿದ್ದರಾಮಯ್ಯ ರಾಜ್ಯಕ್ಕೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದೆ. ಈಗ ಪ್ರಧಾನಿ ಆಗುತ್ತಾರೆ ಎಂಬ ಭವಿಷ್ಯ ನುಡಿಯುತ್ತಿದ್ದೇನೆ. ಇದು ಸತ್ಯ ಆಗುತ್ತದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಎಚ್.ಡಿ.ದೇವೇಗೌಡ ಹಾಗೂ ಕಮ್ಯುನಿಷ್ಟ್ ನಾಯಕರಿಗೆ ಹೆದರಲ್ಲ. ಆದರೆ, ಸಿದ್ದರಾಮಯ್ಯನವರಿಗೆ ಎಲ್ಲರೂ ಹೆದರುತ್ತಾರೆ. ಆದ್ದರಿಂದಲೇ 2018ರಲ್ಲಿ ಮತ್ತೆ ಸಿದ್ದರಾಮಯ್ಯ ಗೆದ್ದು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೆದರಿ ಚಾಮುಂಡೇಶ್ವರಿಯಲ್ಲಿ ಅವರನ್ನ ಸೋಲಿಸಲಾಯಿತು. ಬಿಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸೋಲಿಸಿದರು. ಇದಕ್ಕೆ ಕೆಲ ಕಾಂಗ್ರೆಸಿಗರು ಕೈ ಜೋಡಿಸಿದರು ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment