ಕ್ರೀಡೆ

2019ರಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿ: ಯುವರಾಜ್

2019ರಲ್ಲಿ ಇಂಗ್ಲೆಂಡ್‌‌ ಹಾಗೂ ವೇಲ್ಸ್‌‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನನ್ನ ಕ್ರಿಕೆಟ್‌‌ ವೃತ್ತಿ ಜೀವನದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಾಗಿ ಟೀಂ ಇಂಡಿಯಾ ತಂಡದ ಆಲ್‌‌ರೌಂಡರ್‌‌ ಯುವರಾಜ್‌‌ ಸಿಂಗ್‌‌ ಹೇಳಿದ್ದಾರೆ.2017ರ ಜೂನ್‌‌ನಲ್ಲಿ ಟೀಂ ಇಂಡಿಯಾ ತಂಡದ ಪರ ಕೊನೆ ಏಕದಿನ ಕ್ರಿಕೆಟ್‌‌‌ ಪಂದ್ಯ ಆಡಿರುವ ಯುವರಾಜ್‌, 2019ರ ವಿಶ್ವಕಪ್‌‌ನಲ್ಲಿ ಆಡುವ ಭರವಸೆ ಇದೆ ಎಂದಿದ್ದಾರೆ. ಕಳೆದ ಎರಡು ದಶಕಗಳಿಂದ ಟೀಂ ಇಂಡಿಯಾ ತಂಡದ ಪರ ಆಡಿರುವ 36 ವರ್ಷದ ಯವರಾಜ್‌‌ ಸಿಂಗ್‌‌‌, 2000 ರಿಂದೀಚೆಗೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದೇನೆ. ಅಂದರೆ ಸುಮಾರು 17-18 ವರ್ಷಗಳಾಗಿದ್ದು, ಹೀಗಾಗಿ 2019ರ ವಿಶ್ವಕಪ್‌‌ನಲ್ಲಿ ಖಂಡಿತವಾಗಿ ಆಡುವೆ ಎಂದು ಹೇಳಿದ್ದಾರೆ. ಸದ್ಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ನಲ್ಲಿ ಯುವಿ ಪಂಜಾಬ್‌ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment