ರಾಜಕೀಯ

2019ರ ಲೋಕಸಭೆ ಚುನಾವಣೆ: ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಿದ ಬಿಜೆಪಿ

ಬೆಂಗಳೂರು: 2019ರ ಲೋಕಸಭೆ ಚುನಾವಣೆ ಸಂಬಂಧ ರಾಜ್ಯದ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ಮತ್ತು ಸಂಚಾಲಕರಾಗಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇಮಿಸಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದ ಉಸ್ತುವಾರಿಯಾಗಿ ಕೆ ಎಸ್ ಈಶ್ವರಪ್ಪ, ಸಿ ಎನ್ ಅಶ್ವಥನಾರಾಯಣ ಅವರನ್ನು ಮಂಡ್ಯ, ಜಗದೀಶ್ ಶೆಟ್ಟರ್ ಅವರನ್ನು ಬಳ್ಳಾರಿ, ಬಿ ಶ್ರೀರಾಮುಲು ಕೊಪ್ಪಳ, ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಅವರ ಆಪ್ತ ಸುಬ್ಬಾ ನರಸಿಂಹ ಅವರಿಗೆ ನೀಡಲಾಗಿದ್ದು, ಇದರಿಂದ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ರಾಜಕೀಯ ಪ್ರವೇಶಕ್ಕೆ ಸುಗಮವಾಗಲಿದೆ ಎನ್ನಲಾಗುತ್ತಿದೆ.

ಈ ಕ್ಷೇತ್ರದ ಸಂಚಾಲಕರಾಗಿ ಪದ್ಮನಾಭ ನಗರ ಕ್ಷೇತ್ರದ ಶಾಸಕ ಆರ್ ಅಶೋಕ್ ಅವರನ್ನು ನೇಮಿಸಲಾಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಹಾಸನಕ್ಕೆ ಸಿ ಟಿ ರವಿ, ದಕ್ಷಿಣ ಕನ್ನಡಕ್ಕೆ ಸುನಿಲ್ ಕುಮಾರ್, ಉಡುಪಿ-ಚಿಕ್ಕಮಗಳೂರಿಗೆ ಅರಗ ಜ್ಞಾನೇಂದ್ರ, ತುಮಕೂರಿಗೆ ಅರವಿಂದ ಲಿಂಬಾವಳಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಕೇಂದ್ರ ಭಾಗಕ್ಕೆ ಅಶ್ವಥ ನಾರಾಯಣ, ಬೆಂಗಳೂರು ಉತ್ತರಕ್ಕೆ ಬಿ ಎಚ್ ಕೃಷ್ಣಾ ರೆಡ್ಡಿ ಅವರನ್ನು ಬಿ ಎಸ್ ಯಡಿಯೂರಪ್ಪ ನೇಮಿಸಿದ್ದಾರೆ.

About the author

ಕನ್ನಡ ಟುಡೆ

Leave a Comment