ರಾಷ್ಟ್ರ ಸುದ್ದಿ

2019 ಜನವರಿವರೆಗೆ ರೋಹಿಂಗ್ಯಾ ಪ್ರಕರಣದ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ: ರೋಹಿಂಗ್ಯಾ ವಲಸೆಗಾರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಪ್ರಕಟಿಸಲು 2019ರ ಜನವರಿವರೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್  ಮುಂದೂಡಿದೆ. ಮಾಯಾನ್ಮಾರ್ ನಲ್ಲಿ ರೋಹಿಂಗ್ಯಾ ಸಮುದಾಯದ ವಿರುದ್ಧ ಹಿಂಸಾಚಾರ ಹೆಚ್ಚಾದ ಪರಿಣಾಮ ಸಹಸ್ರಾರು ಸಂಖ್ಯೆಯಲ್ಲಿ ರೋಹಿಂಗ್ಯಾ  ಜನರು  ಭಾರತ ಹಾಗೂ ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದರು. 

ಇಂತಹ ಸುಮಾರು 40 ಸಾವಿರ ನಿರಾಶ್ರಿತರು ಭಾರತದಲ್ಲಿ ನೆಲೆಸಿದ್ದಾರೆ.  ಈ ಪೈಕಿ 16  ಸಾವಿರ ಜನರನ್ನು ವಿಶ್ವಸಂಸ್ಥೆ ನಿರಾಶ್ರಿತ ಎಜೆನ್ಸಿ ನೋಂದಾಯಿಸಿದೆ.ರೋಹಿಂಗ್ಯಾ ಜನರು ಉಗ್ರ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಇವರನ್ನು ಬಳಸಿಕೊಂಡು  ಐಎಸ್ ಐಸ್ ಉಗ್ರರು  ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅವರನ್ನು ದೇಶದಿಂದ ಹೊರ ಕಳುಹಿಸುವುದಾಗಿ ಕೇಂದ್ರಸರ್ಕಾರ ಕಳೆದ ವರ್ಷ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ನೀಡಿತ್ತು. ಮಯಾನ್ಮಾರ್ ನಲ್ಲಿ ಹಿಂಸಾಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಭಾರತದಲ್ಲಿ ನೆಲೆಸಿರುವುದಾಗಿ ರೋಹಿಂಗ್ಯಾ ವಲಸೆಗಾರರಾದ ಮೊಹಮ್ಮದ್ ಸಲೀಮ್ ವುಲ್ಲಾ ಹಾಗೂ ಮೊಹ್ಮದ್ ಶಾಕಿರ್ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

About the author

ಕನ್ನಡ ಟುಡೆ

Leave a Comment