ತಂತ್ರಜ್ಞಾನ

2019 ಜನವರಿ-ಮಾರ್ಚ್ ನಲ್ಲಿ ಚಂದ್ರಯಾನ 2 : ಇಸ್ರೋ

ಬೆಂಗಳೂರು: ಈ ವರ್ಷದಂತ್ಯಕ್ಕೆ ನೆರವೇರಬೇಕಾಗಿದ್ದ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯನ್ನು 2019 ಜನವರಿ-ಮಾರ್ಚ್ ಗೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೇಳಿದೆ. ಅಲ್ಲದೆ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಚಂದಿರನ ಮೇಲೆ ಮೊದಲು ಲ್ಯಾಂಡರ್ ಪರಿಭ್ರಮಣೆ ನಡೆಸಿ ಬಳಿಕ ಅಧ್ಯಯನ ನಡೆಸಲು ತೀರ್ಮಾನಿಸಿದೆ.
“ನಾವು ಜನವರಿ 3 ರಂದು ಚಂದ್ರಯಾನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದ್ದೇವೆ, ನಾವು  ಆ ದಿನದಂದು ಯೋಜನೆ ಕಾರ್ಯಾರಂಭವಾಗಬೇಕೆಂದು ಗುರಿ ಹೊಂದಿದ್ದೇವೆ. ಆದರೆ ಇದು ಮಾರ್ಚ್ ವರೆಗೆ ಸಹ ಮುಂದೂಡಲ್ಪಡಬಹುದು. ಯೋಜನೆ ಪ್ರಾರಂಭದ ದಿನಾಂಕ ಹತ್ತಿರವಾಗುತ್ತಿದ್ದಂತೆ ನಾವು ಗುರಿಯನ್ನು ತಪ್ಪಿಸಿಕೊಳ್ಳಬಹುದು” ಎಂದು ಇಸ್ರೋ ಅಧ್ಯಕ್ಷ  ಕೆ. ಶಿವನ್ ಹೇಳಿದರು.
ಮಿಷನ್ ಅನ್ನು ಮುಂದೂಡಲು ಕಾರಣವೆಂದರೆ ಯೋಜನೆಯ  ವಿನ್ಯಾಸದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಅದು ಚಂದ್ರನ ಮೇಲ್ಮೈ ಮೇಲೆ ಸುಲಭವಾಗಿ ಪರಿಭ್ರಮಣೆ ನಡೆಸಲು ಸಹಕಾರಿಯಾಗಲಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಮಹಾನ್ ಪುರುಷ  ಡಾ. ವಿಕ್ರಮ್ ಸಾರಾಭಾಯ್ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಚಂದ್ರಯಾನ -2 ಉಪಗ್ರಹದ ತೂಕ  600 ಕೆಜಿ ಏಕೆ ಎನ್ನುವ ಪ್ರಶ್ನೆಗೆ ಲ್ಯಾಂಡರ್ ಒಮ್ಮೆ ಚಂದ್ರನ ಮೇಲ್ಮೈ ತಲುಪಿದ ಬಳಿಕ ಅದು ಪ್ರಮುಖ ಉಪಗ್ರದಿಂದ ಕಳಚಿಕೊಳ್ಳಲಿದೆ. ಆಗ ಉಪಗ್ರಹವು ಅಸ್ಥ್ರವಾಗುವ ಸಂಭವವಿದೆ, ಇದರಿಂದಾಗಿ ಲ್ಯಾಂಡಿಂಗ್ ವಿನ್ಯಾಸದ ಮಾರ್ಪಾಡು ಅಗತ್ಯವೆಂದು ಅರಿತಿದ್ದಾರೆ. ಅಲ್ಲದೆ ಆರ್ಬಿಟರ್ ಹೆಚ್ಚು ಹಂತಗಳನ್ನು ಹೊಂದಿರಲಿದೆ, ಇದಕ್ಕೆ ಹೆಚ್ಚಿನ ಪ್ರಮಾಣದ ಇಂಧನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment