ರಾಷ್ಟ್ರ ಸುದ್ದಿ

2019 ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ರೈತರು ಕ್ಷಮಿಸಬಾರದು- ಯಶವಂತ್ ಸಿನ್ಹಾ

ಗುಜರಾತ್ : 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ಕ್ಷಮಿಸಬಾರದು, ಎನ್ ಡಿಎ ಸರ್ಕಾರವನ್ನು ಕಿತ್ತು ಹಾಕಬೇಕೆಂದು  ಕರೆ ನೀಡಿದ್ದಾರೆ. ಗುಜರಾತಿನ ಜುನಾಗಡ ಜಿಲ್ಲೆಯ ವಾಂತಾಲಿ ಬಳಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ರಂಗಗಳಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ರೈತರು, ಯುವಕರು, ಮಹಿಳೆಯರು,ದಲಿತರು ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದಲ್ಲಿ ಕೇವಲ ಹೊಸ ಘೋಷಣೆಗಳನ್ನು ಮಾತ್ರ ನೀಡಲಾಗುತ್ತಿದೆ. ಯಾರಿಗೂ ಅನುಕೂಲ ಮಾಡದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದರಿಂದ ಎಲ್ಲಾದಕ್ಕೂ ಪರಿಹಾರ ದೊರೆಯಲಿದೆ ಎಂದರು. 2014ರ ಚುನಾವಣೆ ವೇಳೆಯಲ್ಲಿ ತಾನೂ ಕೂಡಾ ಬಿಜೆಪಿಯಲ್ಲಿದ್ದರಿಂದ ಕ್ಷಮೆಯಾಚಿಸುತ್ತೇನೆ. ಆದರೆ. ಮುಂದಿನ ಚುನಾವಣೆಯಲ್ಲಿ ಮೋದಿಯನ್ನು ಯಾವುದೇ ಕಾರಣಕ್ಕೂ ಮನ್ನಿಸಬೇಡಿ ಎಂದು ಕರೆ ನೀಡಿದರು.ನರ್ಮದಾ ನದಿ ದಡದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ರೈತರು ನೆನಪಿಗೆ ಬಾರದಿದ್ದುದರಿಂದ ಅವರ ಪರ ಯಾವುದೇ ಯೋಜನೆಗಳನ್ನು ಮೋದಿ ಘೋಷಿಸಿಲ್ಲ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅತೃಪ್ತ ನಾಯಕ ಶತ್ರುಘ್ನ ಸಿನ್ಹಾ ಮಾತನಾಡಿ, ನಾಳೆಯಿಂದಲೇ ಬಿಜೆಪಿ ಪಕ್ಷದಿಂದ ವಜಾಗೊಳಿಸಿದರೆ ಯಾವುದೇ ದೂರು ನೀಡುವುದಿಲ್ಲ. ಪಕ್ಷಕ್ಕಿಂತ ದೇಶದ ಜನರೇ ನನ್ನಗೆ ಮುಖ್ಯ ಎಂದರು.

About the author

ಕನ್ನಡ ಟುಡೆ

Leave a Comment