ದೇಶ ವಿದೇಶ

2019, 2020ರಲ್ಲಿ ಭಾರತ ವೇಗವಾಗಿ ಆರ್ಥಿಕ ಪ್ರಗತಿ: ವಿಶ್ವಸಂಸ್ಥೆ ವರದಿ

ನವದೆಹಲಿ: 2019, 2020ರಲ್ಲಿ  ಭಾರತ ಚೀನಾವನ್ನು ಹಿಂದಿಕ್ಕಿ  ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ವಿಶ್ವಸಂಸ್ಥೆಯ ಆರ್ಥಿಕ ಪರಿಸ್ಥಿತಿ ಮತ್ತು ಪರಿವಿಡಿ ( ಡಬ್ಲ್ಯೂಇಎಸ್ ಪಿ) 2019 ಪ್ರಕಾರ, ಮಾರ್ಚ್ 2019ಕ್ಕೆ ಕೊನೆಗೊಳ್ಳುವ  ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಂದಾಜು ಶೇ. 7.4 ರಷ್ಟಿರುವ  ಭಾರತದ  ಜಿಡಿಪಿ  2019-2020ರಲ್ಲಿ ಶೇ. 7.6 ರಷ್ಟು ವೃದ್ದಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಒಂದು ವರ್ಷದ ನಂತರ ಬೆಳವಣಿಗೆ ದರ ಶೇ, 7.4 ರಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ.ಒಂದು ವೇಳೆ ಚೀನಾ ಆರ್ಥಿಕತೆ 2018ರಲ್ಲಿದ್ದ ಶೇ. 6.6 ರಿಂದ  2019ರಲ್ಲಿ ಶೇ, 6.2ಕ್ಕೆ ಕುಸಿದರೆ 2020ರಲ್ಲಿಯೂ  ಶೇ. 6.2 ರಿಂದಲೂ ಕುಸಿತದ ಹಂತದಲ್ಲಿಯೇ ಮುಂದುವರೆಯುವ ಸಾಧ್ಯತೆ ಇದೆ. ಅನೇಕ ಸುಧಾರಣಾ ಕ್ರಮಗಳಿಂದಾಗಿ ಭಾರತದ ಆರ್ಥಿಕ ಪ್ರಗತಿ  ವೃದ್ದಿಸುತ್ತಿದೆ. ಖಾಸಗಿ ಹೂಡಿಕೆ ಸುಸ್ಥಿರ ಸುಧಾರಣೆ ಹಾಗೂ  ಹೆಚ್ಚಿನ ಸದೃಢತೆಯಿಂದಾಗಿ  ಮಧ್ಯಮ ಅವಧಿಯ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2019 ಹಾಗೂ 2020ರಲ್ಲಿ  ಜಾಗತಿಕ ಆರ್ಥಿಕ ವೃದ್ದಿ ದರ ಶೇ, 3 ರಷ್ಟು ಇರಲಿದ್ದು, ಜಾಗತಿಕ ಆರ್ಥಿಕ ಬೆಳವಣಿಗೆ ದರ ಉತ್ತುಂಗಕ್ಕೇರುವ ಸಾಧ್ಯತೆ ಇದೆ. ಆದಾಗ್ಯೂ, ಅಭಿವೃದ್ದಿಯೊಂದಿಗೆ ಸವಾಲುಗಳನ್ನು ಹೊಂದಿಸಿಕೊಂಡುವುದು ಹೋಗುವುದು  ಭೀತಿಗೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

About the author

ಕನ್ನಡ ಟುಡೆ

Leave a Comment