ಅ೦ತರಾಷ್ಟ್ರೀಯ

2020 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತುಳಸಿ ಗಬ್ಬಾರ್ಡ್ ಚಿಂತನೆ

ಲಾಸ್ ಎಂಜಿಲೆಸ್  : 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಹಿಂದೂ ಜನ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲು ಯೋಚಿಸಿದ್ದಾರೆ ಎಂಬುದು  ಅವರ ಆಪ್ತ  ಮೂಲಗಳಿಂದ ತಿಳಿದುಬಂದಿದೆ. ಮೆಡ್ಟ್ರಾನಿಕ್ ಸಮ್ಮೇಳನದಲ್ಲಿ ಭಾರತೀಯ ಮೂಲದ ಅಮೆರಿಕಾದ ಶ್ರೇಷ್ಠ ವೈದ್ಯ ಡಾ. ಸಂಪತ್ ಶಿವಾಂಗಿ  37 ವರ್ಷದ ಗಬ್ಬಾರ್ಡ್ ಅವರನ್ನು ಪರಿಚಯಿಸಿದರು.

2020ರಲ್ಲಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು. ಹಾವೈಲಿಯಿಂದ ನಾಲ್ಕು ಬಾರಿ ಗೆದ್ದಿರುವ ಕಾಂಗ್ರೆಸ್ ಮಹಿಳೆಯ ಉಪಸ್ಥಿತಿಯಲ್ಲಿ ಡೆಮಾಕ್ರಟಿಕ್ ಪಕ್ಷದ ಗಬಾರ್ಡ್  ಮಾತನಾಡಿದರು. ಆದಾಗ್ಯೂ, 2020ರ ಚುನಾವಣೆಯಲ್ಲಿ ತಾನೂ ಸ್ಪರ್ಧಿಸುವ ಕುರಿತಂತೆ ಏನನ್ನೂ ಹೇಳಲಿಲ್ಲ. ಮುಂದಿನ ವರ್ಷ ಔಪಚಾರಿಕವಾಗಿ ಘೋಷಣೆಯಿಂದ ಅಗತ್ಯ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಕ್ರಿಸ್ ಮಸ್ ಕ್ಕಿಂತಲೂ ಮುಂಚಿತವಾಗಿ ಈ ವಿಚಾರವಾಗಿ ನಿರ್ಧಾರ ಕೈಗೊಳ್ಳಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆದಾಗ್ಯೂ, 2020ರ ಚುನಾವಣೆಗಾಗಿ  ವರ್ಚಸ್ಸು ವೃದ್ದಿಸುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದ ಭಾರತೀಯ ಅಮೆರಿಕೆಯನ್ನರು ಹಾಗೂ ಸ್ವಯಂ ಸೇವಕರನ್ನು ಕ್ಷಿಪ್ರವಾಗಿ ಸಂಪರ್ಕಿಸಲಾಗುವುದು ಎಂದು  ತುಳಸಿ ಗಬ್ಬಾರ್ಡ್ ಹಾಗೂ ಆಕೆಯ ತಂಡ ತಿಳಿಸಿದೆ. ತುಳಸಿ ಗಬ್ಬಾರ್ಡ್ , ಭಾರತೀಯ ಮೂಲದ ಅಮೆರಿಕಾದ ಜನತೆಯಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಈ ಸಮುದಾಯವನ್ನು ತ್ವರಿತಗತಿಯಲ್ಲಿ ತಲುಪಲು ಆಕೆಯ ತಂಡ ಆರಂಭಿಸಿದೆ. ಅಮೆರಿಕಾದಲ್ಲಿನ ಯಹೂದಿ ಸಮುದಾಯ ಹೊರತುಪಡಿಸಿದರೆ  ಭಾರತೀಯ ಅಮೆರಿಕದ ಸಮುದಾಯವೇ ಶ್ರೀಮಂತ ಪರಂಪರೇ ಹೊಂದಿರುವ ಸಮುದಾಯವಾಗಿದೆ.

About the author

ಕನ್ನಡ ಟುಡೆ

Leave a Comment