ಕರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ : ವಿ ವಿ ಶಿಂಧೆ

ಚಿಕ್ಕೋಡಿ : ಕರೋನಾ ವೈರಸ್ ಚಿಕ್ಕೋಡಿ ಉಪವಿಭಾಗದಲ್ಲಿ ಹಬ್ಬಿಲ್ಲ ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ. ಯಾರು ಕೂಡಾ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಚಿಕ್ಕೋಡಿ ತಾಲೂಕಾಧಿಕಾರಿ ವಿ ವಿ ಶಿಂಧೆ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಇಂಡಿಯನ್ ಮೆಡಿಕಲ್ ಆಸೋಷಿಯೆಶನ್ ವತಿಯಿಂದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ‌ಮಾತನಾಡಿದ ಅವರು, ಚಿಕ್ಕೋಡಿ ಪಟ್ಟಣದ ವೈದ್ಯ ಓರ್ವರಿಗೆ ಕರೊನಾ ರೋಗ ಬಂದಿದೆ ಎಂಬುವುದು ಗಾಳಿ ಸುದ್ದಿ, ಚಿಕ್ಕೋಡಿ ಯಾವುದೇ ವೈದ್ಯರಿಗೆ ಕರೋನಾ ಬಂದಿಲ್ಲ ವಿದೇಶಗಳಿಂದ ಬಂದಂತ ಜನರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಈಗಾಗಲೇ ಆಶಾ ಕಾರ್ಯಕರ್ತರು ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ನಿಗಾ ಘಟಕದಲ್ಲಿ ಇರುವಂತಹ ವ್ಯಕ್ತಿಗಳಿಗೆ ಕರೊನಾ ಸೊಂಕು ಇದೆ ಎನ್ನುವ ವದಂತಿಯನ್ನು ನೀಡಬೇಡಿ ಎಂದು ಹೇಳಿದರು.
ವರದಿ ಯಲ್ಲಪ್ಪ ಮಬನೂರ ಚಿಕ್ಕೋಡಿ