ಬ್ರೇಕಿಂಗ್ ನ್ಯೂಸ್

ಕೋವಿಡ್-೧೯, ಏಡ್ಸ್ ಮತ್ತು ಟಿಬಿ ಕುರಿತು ಜಾಗೃತಿ ಆರೋಗ್ಯದ ನಿಯಮಗಳನ್ನು ಪಾಲಿಸಿ ಕೊರೊನಾದಿಂದ ಮುಕ್ತರಾಗಿ

ಮೂಡಲಗಿ: ಕೊರೊನಾ ವೈರಸ್ ಬಗ್ಗೆ ಭಯ ಬೇಡ ಆದರೆ ಮುಂಜಾಗೃತೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯದ ನಿಯಮಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ರಾಯಬಾಗದ ಸಮುದಾಯ ಆರೋಗ್ಯ ಸಮನ್ವಯಾಧಿಕಾರಿ ಝಾಕೀರ ಹುಸೇನ್ ನಧಾಪ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತç ವಿಭಾಗ, ಐಕ್ಯೂಎಸಿ, ಸಮುದಾಯ ಆರೋಗ್ಯ ಕೇಂದ್ರ, ವೈಆರ್‌ಸಿ ಘಟಕ, ಎನ್‌ಎಸ್‌ಎಸ್, ರೆಡ್‌ರಿಬ್ಬನ್ ಮತ್ತು ಆರೋಗ್ಯ ಘಕಟಗಳ ಆಶ್ರಯದಲ್ಲಿ ಆಯೋಜಿಸಿದ ಕೋವಿಡ್-೧೯, ಎಚ್‌ಐವಿ ಏಡ್ಸ್ ಮತ್ತು ಟಿಬಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಚ್ಛತೆಗೆ ಅಧಿಕ ಗಮನ ನೀಡುವುದರ ಮೂಲಕ ವೈರಸ್‌ನಿಂದ ಮುಕ್ತರಾಗಲು ಸಾಧ್ಯ.
ಕೆಮ್ಮು, ಸೀನು ಇರುವ ವ್ಯಕ್ತಿಗಳು ಕೂಡಲೇ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಅಂತರದಲ್ಲಿ ಇರಬೇಕು. ಕೈಕುಲಕುವುದು, ಮುಟ್ಟುವುದನ್ನು ತ್ಯಜಿಸಬೇಕು ಎಂದರು.
ಬೆಳಗಾವಿಯ ಜಿಲ್ಲಾ ಟಿಬಿ ಕೇಂದ್ರದ ಮೇಲ್ವಿಚಾರಕ ಆರ್.ಬಿ. ಕಾಶಪ್ಪನವರ ಟಿಬಿ ಹರಡುವ ಕುರಿತು ಮತ್ತು ಮುಂಜಾಗೃತೆ ಕುರಿತು ಮತ್ತು ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಮೇಲ್ವಿಚಾರಕ ಜಗದೀಶ ಗೊಂದಿ ಎಚ್‌ಐವಿ, ಏಡ್ಸ್ ಕುರಿತು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರಿಮಠ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದ್ದು, ವೈರಸ್‌ಗಳು ಹರಡದಂತೆ ಮುಂಜಾಗೃತೆ ಕ್ರಮಗಳನ್ನು ನಿಷ್ಠೆಯಿಂದ ಪಾಲಿಸಿದರೆ ಯಾವ ರೋಗಗಳು ಬಾದಿಸುವುದಿಲ್ಲ ಎಂದರು. ವಿದ್ಯಾರ್ಥಿಗಳು ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಿ ಸ್ವಾಸ್ಥö್ಯ ಸಮಾಜಕ್ಕೆ ಕಾರ್ಯಮಾಡಬೇಕು ಎಂದರು.
ಆರೋಗ್ಯ ಇಲಾಖೆಯ ಡಾ. ಮಹೇಂದ್ರ ವಾಳ್ವೆಕರ, ಗೋಪಾಲ ಪಾಟೀಲ, ಡಾ. ವಿ.ಆರ್. ದೇವರಡ್ಡಿ ಪ್ರೊ. ಎಸ್.ಎ. ಶಾಸ್ತಿçÃಮಠ ಪ್ರೊ. ಎಸ್.ಸಿ. ಮಂಟೂರ, ಡಾ. ಎಸ್.ಎಲ್.ಚಿತ್ರಗಾರ, ಪ್ರೊ. ವಿ.ಎಸ್. ಹಂಪಣ್ಣವರ, ಲತಾ ನಾಯ್ಕ, ಗೀತಾ ಡೋಣಿ, ಪ್ರೊ. ಮೀಸಿನಾಯ್ಕ ಪ್ರೊ. ಜಿ.ಸಿದ್ರಾಮರಡ್ಡಿ
ಮತ್ತಿತರು ಇದ್ದರು.
ವರದಿ : K. B. Girennavar

About the author

admin