ನಾಡೋಜ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ನಿಧನ

ಹುಬ್ಬಳ್ಳಿ : ವಯೋ ಸಹಜ ಖಾಯಿಲೆಯಿಂದ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ನಗರದ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಪಾಟೀಲ್ ಪುಟ್ಟಪ್ಪ ನಿಧನರಾಗಿದ್ದಾರೆ. ಈ ಮೂಲಕ ಹಿರಿಯ ಸಾಹಿತ್ಯ ಕೊಂಡಿಯೊಂದು ಕಳಜಿ ಬಿದ್ದಂತಾಗಿದೆ.
ಹಿರಿಯ ಸಾಹಿತಿ, ನಾಡೋಜ ಪ್ರಶಸ್ತಿ ಪುರಸ್ಕೃತ ಪಾಟೀಲ್ ಪುಟ್ಟಪ್ಪ(102) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಪೀಡಿತರಾಗಿದ್ದ ಅವರನ್ನು ನಗರ ಕಿಮ್ಸ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕಳೆದ ನಿನ್ನೆಯಷ್ಟೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಾಟೀಲ್ ಪುಟ್ಟಪ್ಪ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈ ಬಳಿಕ ಇಂದು ನಿಧನರಾಗಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದಂತ ನಷ್ಟವಾಗಿದೆ.
ಇತಹ ಹಿರಿಯ ಸಾಹಿತಿ, ನಾಡೋಜ ಪ್ರಶಸ್ತಿ ಪುರಸ್ಕೃತ ಕವಿ ಪಾಟೀಲ್ ಪುಟ್ಟಪ್ಪ ನಮ್ಮನ್ನು ಅಗಲಿದ್ದಾರೆ.
Share