ಬೆಳಗಾವಿ ಮಹಾ ನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಭೆ : ಅಭಯ್ ಪಾಟೀಲ್

ಬೆಳಗಾವಿ : ಬರುವ ಮಹಾ ನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಭೆಯನ್ನು ನಿನ್ನೆ ಭಾನುವಾರ ಶಾಸಕರ ಕಾರ್ಯಾಲಯದಲ್ಲಿ ನಡೆಸಲಾಯಿತು. ಪಕ್ಷದ ಟಿಕೆಟ್ ಬಯಸುವ ಅಭ್ಯರ್ಥಿಗಳು
ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳ ಕೆಲಸ ಕಾರ್ಯಗಳ ಬಗ್ಗೆ ಶಾಸಕರ ಗಮನ ಸೆಳೆದರು , ಚುನಾವಣಾ ರೂಪರೇಷೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು.
ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಯ ಮೇಲೆ ಚುನಾವಣೆ ನಡೆಸುವುದರಿಂದ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಪಕ್ಷದ ” ಬಿ ಪಾರಮ್ ” ನೀಡಬೇಕು, ಯಾವುದೇ ಲಾಬಿಗೆ ಮನಿಯದೇ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂದು ಸಭೆಯಲ್ಲಿ ಒಕ್ಕೂರಲ್ ಅಭಿಪ್ರಾಯ ಮಂಡನೆ ಅಯ್ತು,
ಸಭೆಯನ್ನು ಉದ್ದೇಶಿಸಿ ಮಾಡಿದ ಮಾನ್ಯ ಶ್ರೀ ಅಭಯ ಪಾಟೀಲ ರವರು ಈಗಾಗಲೇ ದಕ್ಷಿಣ ಮತಕ್ಷೇತ್ರದಲ್ಲಿ ಸುಮಾರು 800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಮೇ ತಿಂಗಳ 15 ರ ವರೆಗೆ ಶೇ 80% ಕಾಮಗಾರಿಗಳು ಮುಕ್ತಾಯವಾಗುತ್ತದೆ ಎಂದರು.
ರಸ್ತೆ, ಚರಂಡಿ, ಒಳಚರಂಡಿ, ಲೈಟ್ ಕಂಬಗಳು, ಡೆಕೊರೇಟ್ ಲೈಟ್ಗಳು, music lights, ಯು. ಜಿ. ಕೇಬಲ್ ಅಳವಡಿಕೆ, 24 ಗಂಟೆಗಳ ಕಾಲ ಕುಡಿಯುವ ನೀರು, 1.5 ಲಕ್ಷಗಳ ಅನುದಾನದಲ್ಲಿ ಬಡವರಿಗೆ ಮನೆ ನಿರ್ಮಾಣ, ಸುಮಾರು 60 ಸಾವಿರ ಫಲಾನುಭವಿಗಳಿಗೆ ಆಯುಷ್ಯಮಾನ-ಆರೊಗ್ಯ ಕರ್ನಾಟಕ ಕಾರ್ಡ ವಿತರಣೆ, ಅಂಡರ್ ಗ್ರೌಂಡ್ ಕೇಬಲ್, ಗಾರ್ಡನ್ ಅಭಿವೃದ್ಧಿ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ನಿರ್ಮಾಣ , ಕುಡಿಯುವ ನೀರಿನ ಪೈಪ್ ಲೈನ್, ಬಹು ಮುಖ್ಯವಾಗಿ ಕಸ ವಿಲೇವಾರಿ ಪರಿಹಾರ, ಕೆರೆಗಳ ಅಭಿವೃದ್ಧಿ ಹೀಗೆ, ಸಂಪೂರ್ಣ ದಕ್ಷಿಣ ಮತಕ್ಷೇತ್ರದ ನಗರ ಪ್ರದೇಶಗಳು ಎರಡು ವರ್ಷಗಳಲ್ಲಿ ” ಸ್ಮಾರ್ಟ್ ಸಿಟಿ ಬೆಳಗಾವಿ ಚಿತ್ರಣ” ಕಾಣುತ್ತದೆ ಎಂಬ ಅಭಿಲಾಷೆ ವ್ಯಕ್ತ ಪಡಿಸಿದರು.
ಸ್ವಚ್ಚತೆ ಅಭಿಯಾನದಡಿ “ಸ್ವಚ್ಛ ಸುಂದರ ವಾರ್ಡ್ ಸ್ಪರ್ಧೆ ” ಎಂಬ ಹೊಸ ಕಲ್ಪನೆಗೆ ಚಾಲನೆ ನೀಡಲಾಗುವುದು, ಈ ಮೂಲಕ ಸಾರ್ವಜನಿಕರ ಸಹಭಾಗಿತ್ವದ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು..
ಬರುವ ದಿನಗಳಲ್ಲಿ ಬೆಳಗಾವಿ ಪ್ರವಾಸೋದ್ಯಮ ಕೇಂದ್ರ ( ಪರೆಟನ್ ಕೇಂದ್ರ) ಆಕರ್ಷಣೆಗಾಗಿ ಶಿವಚರಿತ್ರೆ, ಹೆರಿಟೇಜ್ ಪಾರ್ಕ್ ದಲ್ಲಿ ಆರ್ಟ ಗ್ಯಾಲರಿ ನಿರ್ಮಾಣ, ಮಾಡಲಾಗುವುದು, ಅದೇ ರೀತಿ ಬೆಳಗಾವಿಯ ಯುವಕ- ಯುವತಿಯರಿಗಾಗಿ, ಉದ್ಯೋಗ ಸಮಸ್ಯೆ ನಿವಾರಿಸುವ ಭಾಗವಾಗಿ, I. T ಪಾರ್ಕ್ ನಿರ್ಮಾಣದ ಸಂಕಲ್ಪ, ಜೊತೆಗೆ ದೊಡ್ಡ ದೊಡ್ಡ ಕಂಪನಿಗಳಿಗೆ ಕಾರ್ಖಾನೆ ಪ್ರಾರಂಭಿಸಲು ಆದ್ಯತೆ ನೀಡುವ ಮೂಲಕ ಅವಶ್ಯಕ ಸೌಲಭ್ಯ ಒದಗಿಸುವ ನಿಲುವು ಹೊಂದಲಾಗಿದೆ ಎಂದರು.
ಒಟ್ಟಾರೆ, ಇಡೀ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ಡೃಡ ಸಂಕಲ್ಪ ನನ್ನದಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು, ಕೊನೆಯಲ್ಲಿ ಹೊಸ ಮತದಾರರ ನೊಂದಣಿ ಕಾರ್ಯಕ್ಕೆ ತಾವುಗಳು ಹೆಚ್ಚಿನ ಶ್ರಮ ಪಡಬೇಕು ಎಂದು ಸಲಹೆ ನೀಡಿದರು.

Share