ಹಳೆ ವಿದ್ಯಾರ್ಥಿ ಸಂಘದ ಸಭೆ

ಬೈಲಹೊಂಗಲ : ಪಟ್ಟಣದ ಹೊಸೂರ ರಸ್ತೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಭೆ ನಡೆಯಿತು.
ಹಳೆ ವಿದ್ಯಾರ್ಥಿ ಸುಧಾರಾಣಿ ಹೊಸಮನಿ, ಪ್ರೊ.ಆರ್.ಎಸ್.ಮರಿಗೌಡರ ಮಾತನಾಡಿದರು. ಗಾಯಿತ್ರಿ ಬಡಿಗೇರ, ಗೀತಾ ಆರೇರ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿ ಸಂಘದ ಸಂಚಾಲಕಿ ಡಾ.ಮೀನಾಕ್ಷಿ ಮಡಿವಾಳರ ಸಂಘದ ಆಗು ಹೋಗುಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ಷಿಕ ವರದಿ ಮಂಡಿಸಿದರು. ಹಳೇ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೊ.ಭೀಮನಗೌಡ ಪಾಟೀಲ ಸ್ವಾಗತಿಸಿದರು. ಡಾ. ಲಕ್ಷ್ಮಿ ಪಳೋಟಿ ನಿರೂಪಿಸಿದರು. ಪ್ರೊ.ಕೆ.ಟಿ.ತಿಪ್ಪೇಸ್ವಾಮಿ ವಂದಿಸಿದರು.
Share