ಸಂಕೇಶ್ವರ ಸಂತೆಗೆ ಬ್ರೇಕ್‌ ಹಾಕಿದ ಕೊರೊನಾ ಭೀತಿ

ಸಂಕೇಶ್ವರ : ಕೊರೊನಾ ಭೀತಿ ಇಲ್ಲಿನ ಶುಕ್ರವಾರದ ಸಂತೆಯನ್ನು ಬಾಧಿಸಿದೆ. ಸಂಕೇಶ್ವರ ನಗರದ ಪುರಸಭೆಯವರು ಸಂತೆ ಬಂದ್‌ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಸಂಕೇಶ್ವರ ಪುರಸಭೆಯ ಮುಖ್ಯಾಧಿಕಾರಿ ಜಗದೀಶ್ ಈಟಿ ಮಾತನಾಡಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 100 ಜನಕ್ಕಿಂತ ಹೆಚ್ಚು ಸಭೆ ,ಸಮಾರಂಭ ಅಥವಾ ಇನೀತರ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇದಿಸಿರುತ್ತಾರೆ ಆದ ಕಾರಣ ಸಂಕೇಶ್ವರದಲ್ಲಿ ಶುಕ್ರವಾರ ನಡೆಯುವ ಸಂತೆಯನ್ನು ಬಂದ್‌ ಮಾಡಲಾಗಿದೆ. ಇದರಿಂದ ಜನ ಭಯಬೀಳುವ ಅವಶ್ಯಕತೆ ಇಲ್ಲ. ಇದು ಕೇವಲ ಮುಂಜಾಗೃತಾ ಕ್ರಮವಾಗಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
Share