ಕೊರೊನಾ ಭೀತಿ: ಮೂಡಲಗಿ ಸಂತೆ- ಜಾತ್ರೆ, ಸಭೆ- ಸಮಾರಂಭ ರದ್ದು

ಮೂಡಲಗಿ: ಕೊರೊನಾ ವೈರಸ್ ತಡೆಗಟ್ಟಲು ಸಂತೆ, ಜಾತ್ರೆ, ಸಭೆ ಸಮಾರಂಭ ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಸಾವ೯ಜನಿಕರು ಸಹಕರಿಸಬೇಕೆಂದು ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಅವರು ಪುರಸಭೆ ಸಭಾಂಗಣದಲ್ಲಿ ಜರುಗಿದ ಕೋವಿಡ್ 19 ಕೊರೋನಾ ವೈರಸ್ ತಡೆಗಟ್ಟುವ ಮುಂಜಾಗ್ರತ ಕ್ರಮವಾಗಿ ವಿವಿಧ ಇಲಾಖಾಧಿಕಾರಿಗಳ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿ , ಬೇರೆ ಜಿಲ್ಲೆ ಅಥವಾ ಹೋರ ರಾಜ್ಯಗಳಿಂದ ಬರುವ ಹೊಸ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು ಜಾತ್ರೆ, ಸಂತೆ, ದನಗಳ ಪೇಟೆ, ಎ.ಪಿ.ಎಮ್ ಸಿ ಮಾರುಕಟ್ಟೆ ಬಂದ್ ಮಾಡುವ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
ಬೀದಿ ಬದಿಯ ವ್ಯಾಪಾರವನ್ನು ಸರ್ಕಾರ ಮುಂದಿನ ಆದೇಶ ಬರುವರೆಗೆ ಈ ಮೇಲಿನ ಸೂಚನೆಗಳನ್ನು ಪಾಲಿಸಬೇಕು ಎಂದು ಸಭೆಯಲ್ಲಿ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಭಾರತಿ ಕೋಣಿ ಮಾತನಾಡಿ ಕೊರೋನಾ ಲಕ್ಷಣಗಳ ಬಗ್ಗೆ ಮತ್ತು ಕೊರೋನಾ ನಿಯಂತ್ರಣ ಹೇಗೆ ಮಾಡಬೇಕೆಂದು ಹೇಳಿದರು.
ತಹಶೀಲ್ದಾರ ಡಿ ಜೆ ಮಹಾಂತ ಮಾತನಾಡಿ, ಬಯಲು ಶೌಚ, ಸಿಕ್ಕಲ್ಲೆ ಊಗಳುವದನ್ನು ಮಾಡದೆ ಸ್ವಚ್ಛತೆಯನ್ನು ಕಾಪಾಡಿ ಸುಳ್ಳು ವದಂತಿ, ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದರು.
ಡಾ. ತಿಮ್ಮಣ್ಣಾ ಗಿರಡ್ಡಿ ಮಾತನಾಡಿದರು. ಪುರಸಭೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ , ಶಿಕ್ಷಣ ಸಂಯೋಜಕ ಟಿ ಕರಿಬಸವರಾಜ, ಡಾ : ಪ್ರಶಾಂತ ಬಾಬಣ್ಣವರ , ಡಾ. ಖಣದಾಳೆ , ಡಾ : ಮಹೇಶ ಮುಳವಾಡ, ಡಾ : ಪ್ರಶಾಂತ ಬುದ್ನಿ , ಮುಖಂಡರಾದ ರವೀಂದ್ರ ಸಣ್ಣಕ್ಕಿ, ಜಯಾನಂದ ಪಾಟೀಲ, ಅನೇಕರು ಹಾಜರಿದ್ದರು.
Share