ಮೂಡಲಗಿ ಪುರಸಭೆ ಅಧಿಕಾರಿಗಳ ವಿರುದ್ಧ: ವಾಹನ ಸವಾರರ ಆಕ್ರೋಶ

ಮೂಡಲಗಿ : ಪಟ್ಟಣದ ಮುಖ್ಯ ಕಲ್ಮೇಶ್ವ ಸರ್ಕಲ್ ಹಾಗೂ ಮುಖ್ಯ ರಸ್ತೆಯಲ್ಲಿ ಹೈಮಸ್ಟ ಕಂಬವನ್ನು ಸುಮಾರು ಒಂದು ತಿಂಗಳಿದ ಕಾರ್ಯ ಪ್ರಾರಂಭವಾದರೂ ಕೂಡ ಆಮೆ ವೇಗದಲ್ಲಿ ನಡಿತಾ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಬುದುವಾರ ರಾತ್ರಿ ರಸ್ತೆಯ ಅಡ್ಡಲಾಗಿ ಗುಂಡಿ ತೋಡಿದ್ದಾರೆ.
ಪ್ರತಿದಿನ ನೂರಾರು ವಾಹನ ಸವಾರರು ಹಾಗೂ ಬೇರೆ ಪರ ಸ್ಥಳಗಳಿಂದ ಬರುವಂತ ವ್ಯಾಪಾರಿಗಳ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಯಲ್ಲಿ ಅಡ್ಡಲಾಗಿರುವ ಗುಂಡಿಯನ್ನು ನೋಡದೆ ವಾಹನ ಚಲಾಯಿಸಿದರೆ ವಾಹನ ಸವಾರರು ಬಿದ್ದು ಕೈಕಾಲುಗಳು ಮುರಿಯುವುದು ಕಟ್ಟಿಟ್ಟ ಬುತ್ತಿ. ಹೀಗಿರುವಾಗ ಮೂಡಲಗಿ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನಹರಿಸಿಲ್ಲ.
ಪುರಸಭೆ ಅಧಿಕಾರಿಗಳು ಆಗಬೇಕಾದ ಕೆಲಸಗಳನ್ನು ವೇಗವಾಗಿ ಪೂರ್ಣ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗುಂಡಿಯನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಪ್ರಜ್ಞಾವಂತರ ಮಾತಾಗಿದೆ.
Share