ಹಾವು ಕಚ್ಚಿ ಯುವಕ ಸಾವು

ಅರಟಾಳ ; ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಬುಧವಾರ ರಾತ್ರಿ ನಾಗರ ಹಾವು ಕಚ್ಚಿ, ಯುವಕ ಸಾವನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ಬಡಕುಟುಂಬದ ಮಹಾದೇವ ಗೌರವ್ವ ಮಾದರ (34) ಯುವಕ ತಮ್ಮ ತೋಟದಲ್ಲಿರುವ ಶೆಡ್‌ನಲ್ಲಿ ನಿದ್ದೆ ಮಾಡಬೇಂಕೆoದು ಹಾಸಿಗೆ ತಗೆದುಕೊಳ್ಳುವ ಸಂದರ್ಭದಲ್ಲಿ ಹಾಸಿಗೆಯಲ್ಲಿದ ನಾಗರ ಹಾವೂ ಕಚ್ಚಿದೆ.
ಸ್ಥಳೀಯರು ಕೊಡಲೇ ಅಥಣಿಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತ್ತು. ವೈದ್ಯರು ಮಧ್ಯ ದಾರಿಯಲ್ಲಿ ಮಹಾದೇವ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಾವಿನ ಸುದ್ದಿ ತಿಳಿದ ಬಡಕುಟುಂಬದ ಕಣ್ಣಿರಿನ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.