ಮಕ್ಕಳ ಮನಸ್ಸು ಗೆಲ್ಲುವಂತೆ ಬೋಧನೆ ಮಾಡಿ : ಅಕ್ಕಿ

ಬೈಲಹೊಂಗಲ : ಸಮಾಜ ಸೇವೆ ಮಾಡಲು ಭಗವಂತ ಪ್ರತಿಯೊಬ್ಬರಿಗೂ ಅವಕಾಶ ನೀಡಿರುತ್ತಾನೆ. ಅದನ್ನು ಸದ್ವಿನಿಯೋಗ ಮಾಡಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ನಾವಲಗಟ್ಟಿಯ ಸ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಡಿ.ಎಸ್.ಅಕ್ಕಿ ಹೇಳಿದರು.

ಸಮೀಪದ ನಾವಲಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ೮ನೇ ತರಗತಿಯ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡಲು ದೇವರು ಅವಕಾಶ ನೀಡಿದ್ದು ನನ್ನ ಜನ್ಮ ಸಾರ್ಥಕಗೊಂಡಿದೆ. ಜಿಲ್ಲೆಯ ವಿವಿಧೆಡೆ ಸೇವೆ ಸಲ್ಲಿಸಿದ್ದರೂ ಸಹ ತಾಯ್ನಾಡಿನಲ್ಲಿ ನಿವೃತ್ತಿಯಾದದ್ದು ಹೆಮ್ಮೆಯಾಗಿದೆ. ಪ್ರತಿ ವಿದ್ಯಾರ್ಥಿಗಳಲ್ಲೂ ವಿಶಿಷ್ಟ ಪ್ರತಿಭೆ ಇದ್ದು ಶಿಕ್ಷಕರು ಮಕ್ಕಳ ಮನಸ್ಸು ಅರಿತು ಬೋಧನೆ ಮಾಡಿ ದೇಶದ ಸತ್ಪçಜೆಗಳನ್ನಾಗಲು ಪ್ರೇರೇಪಿಸಬೇಕೆಂದರು.

ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಸವರಾಜ ಹೊಸಮನಿ ಅಧ್ಯಕ್ಷತೆವಹಿಸಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಸರೋಜಿನಿ ನಾವಲಗಟ್ಟಿ, ಸದಸ್ಯರಾದ ಸದಾನಂದ ಪಾತ್ರೋಟ, ಸುಮಾ ಕೋಲಕಾರ, ಈರಪ್ಪ ಮೋಡಿ, ಮಾರುತಿ ಕಮ್ಮಾರ, ದೇಮಪ್ಪ ಮುಡಗಲಿ, ಅನ್ನಪೂರ್ಣ ಕಮ್ಮಾರ, ರೇಣುಕಾ ಉಪ್ಪಾರಟ್ಟಿ, ಗೌರವ್ವ ದುಂಡಪ್ಪಗೋಳ, ಅಬ್ದುಲ್ ನಧಾಪ್, ಲಕ್ಷ್ಮಿ ಪೂಜಾರ, ಸುನೀತಾ ತಿಗಡಿ, ಸಂಜು ಹುದಲಿ, ಅನಂತಗೌಡಾ ಪಾಟೀಲ, ಶಿವಾನಂದ ಧರೆಪ್ಪನವರ, ಅಶ್ವಿನಿ ಕಲ್ಲೂರ, ಆರ್.ಬಿ.ಪಾಟೀಲ, ಅಪೂರ್ವ ಕಲ್ಲೂರ ಹಾಗೂ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಎಮ್.ಎಸ್.ಸನದಿ ಪ್ರಾರ್ಥಿಸಿದರು. ಬಿ.ಎಸ್.ಚಿವಟಗುಂಡಿ ಸ್ವಾಗತಿಸಿದರು. ಬಿ.ಡಿ.ಹುದಲಿ ನಿರೂಪಿಸಿದರು. ಎಸ್.ಬಿ.ಲಠ್ಠೆ ವಂದಿಸಿದರು. ನಿವೃತ ಶಿಕ್ಷಕ ಡಿ.ಎಸ್.ಅಕ್ಕಿ, ಸುನಂದಾ ಗೌರಿ ಹಾಗೂ ರಾಜ್ಯ ಮಟ್ಟದ ಮಾಂಡವ್ಯ ಮಹರ್ಷಿ ಪ್ರಶಸ್ತಿ ವಿಜೇತ ಮಹಾಂತೇಶ ರಾಜಗೋಳಿ ಅವರನ್ನು ಶಾಲಾ ಮೇಲುಸ್ತುವಾರಿ ಸಮಿತಿ ಹಾಗೂ ವಿದ್ಯಾರ್ಥಿಗಳಿಂದ, ಗ್ರಾಮಸ್ಥರಿಂದ ಸತ್ಕರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
Share
WhatsApp
Follow by Email