ಕೊರೊನಾ ಭೀತಿ : ಶ್ರೀಶೈಲ ಪಾದಯಾತ್ರೆಯಿಂದ ಬಂದಂತಹ ಭಕ್ತರ ಪರಿಶೀಲನೆ

ಹಳ್ಳೂರ : ಸಮೀಪದ ನುಚ್ಚಂಡಿ ತೋಟದಲ್ಲಿ ಶ್ರೀಶೈಲದಿಂದ ಬಂದಂತಹ ಭಕ್ತಾದಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹೇಶ್ ಕಂಕನವಾಡಿ ಪರಿಶೀಲನೆ ಮಾಡಿ ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಿ, ವೈರಸ್ ಹರಡದಂತೆ ಯಾವ ರೀತಿಯಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ತಿಳಿಸಿದ್ದಾರೆ.
ಗ್ರಾಮದ ಸಾರ್ವಜನಿಕರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾದಯಾತ್ರೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೋಗಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಯನ್ನು ರದ್ದುಮಾಡಿ ಶ್ರೀಶೈಲದಿಂದ ಭಕ್ತರನ್ನು ತಮ್ಮ ಊರುಗಳಿಗೆ ಕಳಿಸಿದ್ದಾರೆ.
ಈ ವರ್ಷವೂ ಯುಗಾದಿ ಮುಗಿದಮೇಲೆ ಸ್ವಗ್ರಾಮಕ್ಕೆ ಆಗಮಿಸಬೇಕಾದ ಭಕ್ತರು ಕೊರೊನಾ ಭೀತಿಯಿಂದ ಯುಗಾದಿ ಮುಂಚಿತವಾಗಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಇದರಿಂದ ಗ್ರಾಮದ ಒಳಗಡೆ ಬರಲು ಅವಕಾಶವಿಲ್ಲ. ಯಾಕೆಂದರೆ ಶ್ರೀಶೈಲದಿಂದ ಕಂಬಿ ಮಲ್ಲಯ್ಯ ಬರುವವರೆಗೂ ಭಕ್ತರು ಊರ ಒಳಗಡೆ ಹೋಗುವಂತಿಲ್ಲ ಎಂಬ ಪದ್ಧತಿ ಇದೆ.
ಇದರ ನಡುವೆ ಭಕ್ತಾದಿಗಳಿಗೆ ಕೊರೊನಾ ಭೀತಿ ಎದುರಾಗಿದೆ.
Share