ಲಾಕ್ ಡೌನ್ ಉಲ್ಲಂಘನೆ: ಭರ್ಜರಿ ಸಾಗಿದ ಕೊಣ್ಣೂರ ಸಂತೆ

ಬೆಳಗಾವಿ : ಕೊರೋನಾ ಕಂಪನಕ್ಕೆ ಜಿಲ್ಲೆಯ ಬಹುತೇಕ ಸಂತೆ ಮಾರುಕಟ್ಟೆ ರದ್ದುಗೊಳಿಸಿಲಾಗಿದೆ, ರಾಜ್ಯದ ಸರಕಾರ ಕೊರೋನಾ ಭೀತಿಯಿಂದ
ಬೆಳಗಾವಿಗೂ ಲಾಕ್ ಡೌನ್ ಎಲ್ಲವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೊಣ್ಣೂರನ ಸಂತೆಯಲ್ಲಿ ಜನಜಾತ್ರೆ ಹಬ್ಬಿಕೊಂಡಿದೆ.
ಜಿಲ್ಲಾಧಿಕಾರಿಗಳ ಆದೇಶ‌ಕ್ಕೆ ಮಣ್ಣಿಯದ ನಾಗರಿಕರು ಕೊರೋನಾ ಭಯವಿಲ್ಲದೆ ಬೃಹತ್ತಾಗಿ ಸಂತೆ ಖರೀದಿಯಲ್ಲಿ ವ್ಯಾಪಾರಿ, ಗ್ರಾಹಕರು ‌ಮಗ್ನರಾಗಿದ್ದಾರೆ ಆಶ್ಚರ್ಯಕರ ಸಂಗತಿ ಉದ್ಭವಾಗಿದೆ.
ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಸರಕಾರದ ಆದೇಶ ಅಲ್ಲಗೆಳಲಾಗಿದೆ. ಈ ಮಾರುಕಟ್ಟೆ ಜನಸಂದಣಿಯಿಂದ ವ್ಯಾಪಕ ಚರ್ಚೆಯಾಗಿದ್ದು ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗುವಂತೆ ಸ್ಥಳೀಯ ನಾಗರೀಕರು
ದೂರಿದ್ದಾರೆ.
ಬೆಳಗಾವಿಗೂ ಲಾಕ್ ಡೌನ್ ಹೇರಿರುವ ಸಿಎಂ ಅವರ ಮಾತಿಗೆ ಇಲ್ಲಿನ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮಲ್ಲವಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ದಿಂದ ರಾಜಾರೋಷವಾಗಿ ಸಂತೆ ನಡೆಸಲಾಗುತ್ತಿದ್ದು ನಿರ್ಬಂಧ ವಿಧಿಸಲು
ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.
ಸಾವಳಗಿ, ಘಟಪ್ರಭಾ, ಗೋಕಾಕ ರೊಡ, ಮರಡಿಮಠ, ಶಿವಾಪೂರ, ಘೊಡಗೇರಿಗೆ ಸಂಪರ್ಕ ಕೊಂಡಿಯಾಗಿರುವ ಕೊಣ್ಣೂರ ಸಂತೆಗೆ ಸಾವಿರಾರು ರೈತರು, ಕಾಳ ಸಂತೆ ಜನರು ಹಾಗೂ ಸಾರ್ವಜನಿಕರಿಂದ ಆತಂಕ ಎದುರಾಗಿದೆ.
ಇಷ್ಟೆಲ್ಲ ಕಾರ್ಯ ಚಟುವಟಿಕೆ ನಡೆದರೂ ಇಲ್ಲಿನ ಪೊಲೀಸರು ಮತ್ತು ಸ್ಥಳಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
Share