ಕೊರೊನಾ ಭೀತಿ ಹಿನ್ನೆಲೆ : ಇನ್ನು 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ -ಮೋದಿ ಘೋಷಣೆ

ನವದೆಹಲಿ: ಇನ್ನು 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ ಆಗಲಿದೆ. ಏ.15ರ ವರೆಗೆ ಯಾರೂ ಮನೆಯಿಂದ ಹೊರಗೆ ಬರಬೇಡಿ. 21 ದಿನ ನೀವು ಮನೆಯಲ್ಲಿರದಿದ್ದಲ್ಲಿ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗಲಿದೆ -ಪ್ರಧಾನ ನರೇಂದ್ರ ಮೋದಿ ರಾಷ್ಟ್ರದ ಜನರಿಗೆ ಮಾಡಿದ ಮನವಿ ಮತ್ತು ಎಚ್ಚರಿಕೆ.
ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿರುವ ಮೋದಿ, ಜನರಲ್ಲಿ ಕೈ ಮುುಗಿದು ಮನವಿ ಮತ್ತು ಎಚ್ಚರಿಕೆಯ ಸಂದೇಶ ನೀಡಿದರು.
ಕೊರೋನಾದಿಂದ ವಿಶ್ವದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ, ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಂಡು ಎಲ್ಲಿದ್ದೀರೋ ಅಲ್ಲೇ ಇರಿ. ಏನು ಮಾಡಬೇಕೆಂದಿದ್ದೀರೋ ಅಲ್ಲಿಂದಲೇ ಮಾಡಿ. ದಯಮಾಡಿ ಹೊರಗೆ ಬರಬೇಡಿ. ನಾನು ನಿಮಗೆ ಕೈ ಮುಗಿದು ಪ್ರಾರ್ಥಿಸುತ್ತೇನೆ. 21 ದಿನದ ನಂತರ ಎಲ್ಲವೂ ಸುಗಮವಾಗಲಿದೆ ಎಂದು ಹೇಳಿದರು.
Share