ಮೂಡಲಗಿ : ಪೆಟ್ರೋಲ್ ಬಂಕ್ ಬಂದ್ ! ಸುಳ್ಳು ವದಂತಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಮುಗಿ ಬಿದ್ದ ಜನ

ಮೂಡಲಗಿ : ಕೊರೊನಾ ವೈರಸ್ ಹಿಮ್ಮೆಟ್ಟಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಕೆಲವು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ.
ಹೌದು ಮೂಡಲಗಿ ತಾಲೂಕಾದ್ಯಂತ ಪೆಟ್ರೋಲ್ ಬಂಕ್ ಗಳು ಬಂದಿದೆ ಎಂದು ಮಂಗಳವಾರ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಬುದುವಾರ ಗುರ್ಲಾಪುರ ಹಾಗೂ ಮೂಡಲಗಿ ಪೆಟ್ರೋಲ್ ಬಂಕ್ ಗಳಲ್ಲಿ ಜನರು ಪೆಟ್ರೋಲ್, ಡಿಸೈಲ್ ಗಾಗಿ ಕ್ಯಾನುಗಳನ್ನು ತಗೆದುಕೊಂಡು ಜನರು ಮುಗಿಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರು ತಮ್ಮ ವಾಹನಗಳಿಗೆ ಫುಲ್ ಟ್ಯಾಂಕ್ ಮಾಡಿಸಿ, ಕ್ಯಾನುಗಳಲ್ಲಿ ಪೆಟ್ರೋಲ್ ಡಿಸೈಲ್ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿತ್ತು.
ಈ ರೀತಿಯಾಗಿ ಸುಳ್ಳು ವದಂತಿಗಳು ಹಬ್ಬಿಸುತ್ತಿರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
Share