ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರ ನೀಡಿ ಮಾನವಿಯತೆ ಮೇರೆದ ಶಿಕ್ಷಕಿ : ಆಶ್ರುತ್

ಮೂಡಲಗಿ: ಪಟ್ಟಣದಲ್ಲಿ ಲಾಕ್‌ಡೌನ್ ಇರುವುದರಿಂದ ಪಟ್ಟಣದ ಎಲ್ಲ ಅಂಗಡಿ ಮುಗಟ್ಟುಗಳು ಬಂದ್ ಆಗಿವೆ. ಸಾರ್ವಜನಿಕರು ಹೊರಗಡೆ ಬಾರದಂತೆ ನೋಡಿಕೊಳ್ಳಲು ಪೋಲಿಸ್ ಇಲಾಖೆಯ ಸಿಂಬ್ಬಧಿಗಳು ಮಾತ್ರ ಪಟ್ಟಣ ಪ್ರಮುಖ ರಸ್ತೆಯಲ್ಲಿ ನಿಂತಿದ್ದಾರೆ.
ಹೌದು ಇಂತಹ ಮಹಾಮಾರಿ ಕೊರೊನಾ ವೈರಸ್ ಬಂದಿರುವುದರಿoದ ಹಿನ್ನಲೆ ಇಡೀ ದೇಶವೇ ಬಂದ್ ಇರುವುದರಿಂದ ಪೋಲಿಸ್ ಅಧಿಕಾರಿಗಳು ಲಾಕ್‌ಡೌನ್ ಹಾಗೂ ಸರಕಾರದ ಆದೇಶದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಿರುವಾ ಬೇಸಿಗೆ ಕಾಲದಲ್ಲಿ ಸಂಪೂರ್ಣವಾಗಿ ಪಟ್ಟಣ ಬಂದ ಇರುವುದರಿಂದ ಅಧಿಕಾರಿಗಳಿಗೆ ಕಾಲದಲ್ಲಿ ಕುಡಿಯ ನೀರು ಸಹ ಸಿಗುವುದಿಲ್ಲ, ಬೆಳಗ್ಗಿನ ಉಪಹಾರ, ಮಧ್ಯಹ್ನಾ ಊಟ ಸೀಗುವುದಿಲ್ಲ.
ಇಂಹತ ಸಂದರ್ಭದಲ್ಲಿ ಪಟ್ಟಣದ ಮಕ್ಕಳ ಮನೆಯ ಶಾಲೆಯ ಶಿಕ್ಷಕಿ ಆಶ್ರುತ್ ಅವರು ಇಂದು ಬೆಳಗ್ಗೆ ಪೋಲಿಸ್ ಅಧಿಕಾರಿಗಳಿಗೆ ಉಪಹಾರ ಮತ್ತು ಶುದ್ದ ಕುಡಿಯುವ ನೀರು ಚಾಹ್ ವಿತಸಿರುವ ಮೂಲಕ ಮಾನವಿಯತೆ ಮೆರೆದಿದ್ದಾರೆ
Share