ಹಾರೂಗೇರಿ ಪೋಲಿಸ್ ಠಾಣೆಯ ವತಿಯಿಂದ ಮಾಸ್ಕ ವಿತರಣೆ ಮತ್ತು ಜನಜಾಗೃತಿ.

ಮುಗಳಖೋಡ: ಹಾರೂಗೇರಿಯ ಪೋಲಿಸ ಠಾಣೆಯ ವತಿಯಿಂದ ಹಂದಿಗುoದ ಗ್ರಾಮದಲ್ಲಿ ಕೋರೊನ ವೈರಸ ತಡೆಗಟ್ಟುವ ನಿಟ್ಟಿನಲ್ಲಿ ಶುಕ್ರವಾರ ನಡೆಯುವ ಸಂತೆಯನ್ನು ರದ್ದುಗೋಳಿಸಿ ಎಲ್ಲ ಜನರಿಗೆ ಕೋರೊನ ತಡೆಗಟ್ಟುವ ವಿದಾನ ಹೇಳಿ ಮಾಸ್ಕ ಹಾಗೂ ಕೋರೊನ ವೈರಸ ಹೇಗೆ ತಡೆಗಟ್ಟಬೇಕೆಂಬ ವಿವರಣೆಯ ಕರಪತ್ರಗಳನ್ನು ವಿತರಿಸಿದರು. ಇದೆ ವೇಳೆ ಕೋರೊನ ಜಾಗೃತಿಯಬಗ್ಗೆ ಗ್ರಾಮದ ಎಲ್ಲ ಜನರಿಗೆ ಕರೋನ ವೈರಸ ಹೇಗೆ ತಡೆಗಟ್ಟಬೇಕು ಮತ್ತು ಅದರಿಂದ ಹೇಗೆ ದೂರ ಉಳಿಯಬೇಕು ಯಾವರೀತಿ ಸುರಕ್ಷೆತೆಯನ್ನು ಕಾಪಾಡಿಕೊಳ್ಳಬೇಕೆಂಬುದರ ಬಗ್ಗೆ ಬಿಟ ಪೋಲಿಸರಾದ ಆರ್ ಆರ್ ವಾಗ್ಮೋರೆ ಹೇಳಿದರು.
ನ್ಯಾಯಬೆಲೆ ಅಂಗಡಿಯಲ್ಲಿ ಸುರಕ್ಷಿತ ಅಂತರ ಕಾಪಾಡುವದು ಹೇಗೆ ಎಂಬುದರ ಬಗ್ಗೆ ಸದರಿ ಸಾಲುಗಳಲ್ಲಿ ಅಂತರ ಕಾಪಾಡುವುದನ್ನು ಬಾಕ್ಷ ಹಾಕಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಶಿವಪ್ಪ ಹೋಸೂರ, ಪಿ.ಕೆ.ಪಿ.ಎಸ್ ಸೋಸೈಯಟಿಯ ಕಾರ್ಯದರ್ಶಿ ಶ್ರಿ ಬಾಲಪ್ಪ ನಾಯಕ, ಶಿಕ್ಷಕ ಸಿ.ಎಸ್.ಹಿರೇಮಠ, ಪಿ.ಡಿ.ಓ ಸವಿತಾ ಚಿನಗುಂಡಿ, ಬೋರವ್ವಾ ಯರಗುದ್ರಿ, ಮಲ್ಲಪ್ಪ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
Share