ಹೇಳೋರು ಕೇಳೋರು ಯಾರೂ ಇಲ್ಲವೇ: ಬೇಕಾಬಿಟ್ಟಿ ದರಕ್ಕೆ ದಿನಸಿ ಮಾರಾಟ


ಚಿಕ್ಕೋಡಿ ೨೭: ಕೊರೊನಾ ಮಹಾಮಾರಿಗೆ ಇಡೀ ವಿಶ್ವ ವೆ ತನಗಾಗಿದು ಇದನ್ನೆ ಬಂಡವಾಳವನ್ನಾಗಿಸಿಕೊಂಡಿರುವ ತರಕಾರಿ, ಹಣ್ಣು‌ ಮಾರಾಟಗಾರರು ಮತ್ತು ದಿನಸಿ ಅಂಗಡಿಯವರು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡುತ್ತಿದ್ದು, ಹೇಳುವವರು, ಕಳೋರು ಯಾರೂ ಇಲ್ಲದಂತಾಗಿದೆ.ಒಂದು ವೇಳೆ ಬಡವರು ಇಷ್ಟು ಯಾಕೆ ರೇಟ ಎಂದು ಕೇಳಿದರೆ ರೇಟ್ ಜಾಸ್ತಿಯಾಗಿದೆ ಬೆಕಾದರೆ ತಗೊಳಿ ಇಲ್ಲವಾದರೆ ಬಿಡಿ ಎಂದು ಬಡವರಿಗೆ ದಬ್ಬಾಳಿಕೆಯನ್ನು ಮಾಡುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಎಷ್ಟೊಂದೋ ರೈತರು ತಾವು ಬೆಳೆದ ಹಣ್ಣು ತರಕಾರಿ ಮಾರಾಟ ಮಾಡಲಾಗದೇ ಕಂಗಾಲಾಗಿದ್ದರೆ, ಇತ್ತ ಲಾಕಡೌನ ಉದ್ದೇಶ ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿರುವ ಕೆಲ ವ್ಯಾಪಾರಸ್ಥರು ಸಕ್ಕರೆ, ಅಡುಗೆ ಎಣ್ಣೆ, ಈರುಳ್ಳಿ ಕೊತಬಂರಿ , ಹಾಗೂ ಇನ್ನಿತರ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ತಮ್ಮ ಮನಸೋ ಇಚ್ಚೆ ಏರಿಕೆ ಮಾಡಿದ್ದಾರೆ. ಇದರಿಂದಾಗಿ ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ, ಹುಕ್ಕೇರಿ, ನಿಪ್ಪಾಣಿ ತಾಲೂಕುಗಳಲ್ಲಿ ಈ ಬಗ್ಗೆ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ೩೫ರಷ್ಟಿದ್ದ‌ ಸಕ್ಕರೆ ದರ ೪೦ಕ್ಕೆ ಏರಿಕೆ‌ ಮಾಡಿದ್ದರೆ, ಅಡುಗೆ ಎಣ್ಣೆ ದರ ೯೦ರಿಂದ ೧೦೦ಕ್ಕೆ ಏಕಾಏಕಿ ಏರಿಕೆ‌ ಮಾಡಲಾಗಿದೆ. ಇನ್ನೂ ೨೦ರ ಆಸುಪಾಸಿನಲ್ಲಿದ್ದ ಈರುಳ್ಳಿ ೪೦ಕ್ಕೆ ಮಾರಾಟ ಮಾಡಲಾಗುತ್ತಿದೆ. ರೈತರು ಬೆಳೆದ ತರಕಾರಿಗೆ ಮಾರುಕಟ್ಟೆ ಇಲ್ಲದೇ ತರಕಾರಿ ಕೊಳೆತು ಹೋಗುತ್ತಿದ್ದರೆ ಅಲ್ಲೊಂದು, ಇಲ್ಲೊಂದು ತೆರೆದಿರುವ ತರಕಾರಿ ಅಂಗಡಿಗಳಲ್ಲಿ ದರ ಕೇಳಿದರೆ ಬಡವರು ಬಾಯಿ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃತಕ ಅಭಾವ ಸೃಷ್ಟಿ:
ಎಲ್ಲ ಕಡೆಗಳಲ್ಲಿ ಲಾಕಡೌನ ಬಗ್ಗೆ ಉಂಟಾದ ಭೀತಿಯಿಂದ ಮಾರುಕಟ್ಟೆಯಲ್ಲಿ ಸರಕು ಸಾಗಾಣೆ ಅಭಾವ ಉಂಟಾಗಿದ್ದು, ಈ ಅಭಾವವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ವ್ಯಾಪಾರಿಗಳು ಬಡ ಹಾಗೂ ಮಧ್ಯಮ ವರ್ಗದ ಜನರ. ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ಕೆಲ ಅಧಿಕಾರಿಗಳು ಸಹ ಪ್ರೋತ್ಸಾಹ ಮುಂದುವರೆದಿದೆ.
ಒಟ್ಟಾರೆಯಾಗಿ‌ ಕೂಲಿ ಕೆಲಸ ಸಿಗದೇ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಹರಸಾಹಸಪಡುತ್ತಿರುವ ಅದೇಷ್ಟೊ ಜನ ಖಾಲಿ ಹೊಟ್ಟೆಯಲ್ಲಿ ‌ನರಳಾಡುತ್ತಿದ್ದರೆ, ಇತ್ತ ನಿರಾಯಾಸವಾಗಿ ಜನರ ಜೇಬಿಗೆ ಕತ್ತರಿ ಇಡುತ್ತಿರುವ ವ್ಯಾಪಾರಿಗಳಿಗೆ ಉಗುದಾರ ಹಾಕುವವರ್ಯಾರು ಎಂಬ ಪ್ರಶ್ನೆ ಶ್ರೀಸಾಮಾನ್ಯರದ್ದಾಗಿದೆ.
Share
WhatsApp
Follow by Email