ಅನ್ನದಾತರು ಬೆಳೆದ ಬೆಳೆಗೆ ಸಿಗುತ್ತಿಲ್ಲ ಯೋಗ್ಯ ಧಾರಣಿ ; ರೈತರ ಆತ್ಮಹತ್ಯೆ ತಪ್ಪಿಸಲು ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯ; ಗಡಾದ

ಬೆಳಗಾವಿ ; ರೈತರು ಬೆಳೆದಿರುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಿ ಖರೀದಿಸುವ ಸಲುವಾಗಿ, ಪ್ರತಿ ತಾಲೂಕು/ಹೋಬಳಿ ಮಟ್ಟದಲ್ಲಿ ಸರಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದರ ಮೂಲಕ ಸಂಭವಿಸಬಹುದಾದ ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ದೇಶದಲ್ಲಿ ಹರಡಿರುವ ಭಯಾನಕ ಕರೋನಾ ರೋಗವನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಸಂಪೂರ್ಣ “ಲಾಕ್‌ಡೌನ್” ಜಾರಿಗೆ ಮಾಡಿರುವುದರಿಂದ ಜಿಲ್ಲೆಯ ರೈತರು ಬೆಳೆದಿರುವ ಗೋವಿನÀ ಜೋಳ, ಅರಷಿಣ, ದ್ರಾಕ್ಷಿ, ಕಲ್ಲಂಗಡಿ, ಟೋಮ್ಯಾಟೋ ಸೇರಿದಂತೆ ಇನ್ನಿತರ ಕೃಷಿ/ತೋಟಗಾರಿಕಾ ಉತ್ಪನ್ನಗಳನ್ನು ಬೇರೆ ಕಡೆಗೆ ಸಾಗಾಣಿಕೆ ಮಾಡಲು ವಾಹನಗಳ ಇರುವುದಿಲ್ಲ. ಅಲ್ಲದೇ ಜಿಲ್ಲಾ ಮತ್ತು ಅಂತರ ರಾಜ್ಯ ನಿರ್ಬಂಧÀವಿರುವುದರಿAದ ನೆರೆಯ ಮಹಾರಾಷ್ಟç ಮತ್ತು ಇತರ ಜಿಲ್ಲೆಗಲ್ಲಿರುವ ಮಾರುಕಟ್ಟೆಗಳಿಗೆ ಹೋಗಿ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಸ್ಥಳಿಯವಾಗಿ ಇವುಗಳನ್ನು ಖರೀದಿಸಲು ಸಹ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲವಾದ್ದರಿಂದ ಈ ಎಲ್ಲ ಉತ್ಪನ್ನಗಳ ಬೆಲೆಗಳನ್ನು ಕುಸಿದಿರುತ್ತವೆ. ಇದ್ದರಿಂದಾಗಿ ರೈತರು ಸಾಲ ಮಾಡಿ ಹಣತಂದು ಖರ್ಚು ಮಾಡಿ ಬೆಳೆದಿರುವ ಇವುಗಳನ್ನು ರಸ್ತೆಯ ಬದಿಗೆ, ಹಳ್ಳಕ್ಕೆ ಎಸೆಯುತ್ತಿರುವರು.
ಸದ್ಯ ದೇಶದಲ್ಲಿ ಹಬ್ಬುತ್ತಲಿರುವ ಭಯಂಕರ ಕರೋನಾ ರೋಗದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ, ಕಷ್ಟ ಪಟ್ಟು ತಾವು ಬೆಳೆದಿರುವ ಬೆಳೆಗಳಿಗೆ ಯೋಗ್ಯ ದಾರಣಿ ಸಿಗಲಿಲ್ಲವೆಂಬ ಕಾರಣಕ್ಕಾಗಿ ಸಾಲ ಮಾಡಿ ಇವುಗಳನ್ನು ಬೆಳೆದ ರೈತರು ಆತ್ಮಹತ್ಯಗೆ ಶರಣಾಗುವ ಪ್ರಸಂಗಗಳು ಕೂಡಾ ನಡೆಯಬಹುದಾಗಿದೆ.
ಆದ್ದರಿಂದ ಈ ಕುರಿತು ಸೂಕ್ತ ಕ್ರಮ ಕೈಕೊಳ್ಳುವ ಸಲುವಾಗಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿ ಕೂಡಲೇ ಇದನ್ನು ಕಾರ್ಯರೂಪಕ್ಕೆ ತರುವಂತೆ ಉತ್ತರ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗುಂ ಗಡಾದ ಅವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಲಾಗಿದೆ.
Share