ಹಳ್ಳೂರ ; ದಿನಸಿ ಅಂಗಡಿ ಮಾಲಿಕರಿಗೆ ಎಚ್ಚರಿಕೆ

ಹಳ್ಳೂರ  ; ದೇಶದಲ್ಲಿ ಕರೋನಾ ವೈರಸ್ದಿಂದ ಪಾರಾಗಲು ಪ್ರಧಾನಿಯವರು ದೇಶವನ್ನ ಲಾಕ ಡೌನ್ ಆದೇಶ ಹೊರಡಿಸಿದ್ದು. ಗ್ರಾಮದಲ್ಲಿ ಜನರ ಹಿತದೃಷ್ಟಿಯಿಂದ ಪ್ರತಿ ದಿನ ಕಿರಾಣಿ ಅಂಗಡಿಗಳು ಹಾಗೂ ಕಾಯಿಪಲ್ಲೆ ಕೊಳ್ಳಲು  ದಿನಾಲು ಮುಂಜಾನೆ  8 ಗಂಟೆಯಿಂದ 10.ಗಂಟೆಯವರಿಗೆ ಸಮಯ ನಿಗದಿಯಾಗಿದ್ದು. ಗ್ರಾಮದ ಕೆಲವು ಅಂಗಡಿಕಾರರು  ಗ್ರಾಹಕರಿಂದ ಗಾಣದ ಎಣ್ಣೆ ಪ್ರತಿ ಕಿಲೋಗೆ 115ರಿಂದ 140 ರೂ  ಸಕ್ಕರೆ 40ರಿಂದ 45ವರೆಗೆ ಹೀಗೆ ಪ್ರತಿ ವಸ್ತುವಿನಿಂದ ಹೆಚ್ಚಿನ ದರ ಪಡೆದು ಗ್ರಾಹಕರಿಗೆ ಮೋಸಮಾಡುತ್ತಿದ್ದು ಇದನ್ನು ಮನಗಂಡು ಗ್ರಾಹಕರ ಸಮೇತವವಾಗಿ ಗ್ರಾಮ ಪ ಅಭಿವೃದ್ಧಿ ಅಧಿಕಾರಿ ಹಣಮಂತ ತಾಳಿಕೋಟಿ. ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೆಪ್ಪಗೋಳ. ಬಿಟ್ ಪೊಲೀಸರಾದ ನಾಗಪ್ಪ ಒಡೆಯರ. ಕಿಶೋರ ಗಣಾಚಾರಿ. ಗಿರಮಲ್ಲ ಸಂತಿ.ಅಶೋಕ ಬಾಗಡಿ  ಸಂಗಪ್ಪ ಪಟ್ಟಣಶೆಟ್ಟಿ.  ಹಾಗೂ ನಾಗಪ್ಪ ಆರೇರ  ವರದಿಗಾರರಾದ  ಮುರಿಗೆಪ್ಪ ಮಾಲಗಾರ ಇಬ್ರಾಹಿಂ ಮುಜಾವರ.ರಮೇಶ ಸವದಿ.ಗ್ರಾಮಸ್ಥರು ಸೇರಿ  ಅಂಗಡಿಕಾರರಿಗೆ ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ದಿನಸಿ ಮಾರಾಟದಲ್ಲಿ ದರ ಏರಿಕೆ ಮಾಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವದು  ಎಂದು ಆದೇಶಿಸಲಾಯಿತು
Share