ಗ್ರಾಮೀಣ ಭಾಗದಲ್ಲಿ ಕೋವಿಡ್೧೯ ಹರಡದಂತೆ ಸರ್ಕಾರದ ಆದೇಶ ಚಾಚು ತಪ್ಪದೆ ಪಾಲನೆ

ಅಥಣಿ: ಕೋವಿಡ್೧೯ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಥಣಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸರ್ಕಾರ ನಿಲುವನ್ನು ಚಾಚು ತಪ್ಪದೆ ಪಾಲನೆ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ಲಾಕ್ ಡೌನ್ ಆದೇಶಕ್ಕೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಕೆರೆಗೆ ದೇಶದ ಜನತೆ ಬೆಂಬಲ ಸೂಚಿಸಿದ್ದಾರೆ, ಆದರೆ ಪಟ್ಟನ ಪ್ರದೇಶದಲ್ಲಿ ಕೆಲವು ಜನರು ಇನ್ನೂ ಕೊರೊನಾ ವೈರಸ್ ಬಿತಿ ಇಲ್ಲದೆ ಗುಂಪು ಗುಂಪಾಗಿ ಓಡಾಟ, ಸಹಸ್ರಾರು ಸಂಖ್ಯೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಶಹರದಲ್ಲಿ ನಾವು ದಿನನಿತ್ಯ ಕಾಣಬಹುದು, ಆದರೆ ಅಥಣಿ ತಾಲೂಕಿನ ಹಳ್ಳಿಗಳು ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚು ತಪ್ಪದೆ ಪಾಲನೆ ಮಾಡುತ್ತಿದ್ದಾರೆ,
ಗ್ರಾಮೀಣ ಭಾಗದ ಕಿರಾಣಿ ಅಂಗಡಿ ಮುಂದೆ ಜಾಗತಿಕ ಅಂತರ ಕಾಯ್ದುಕೊಂಡು ದಿನನಿತ್ಯ ಬಳಸುವ ಆಹಾರ ಪದಾರ್ಥಗಳನ್ನು, ಹಾಗೂ ಇತರೆ ವಸ್ತುಗಳನ್ನು ಖರೀದಿ ಮಾಡುತ್ತಾರೆ, ಕೆಲವರು ರೈತರು ಜಮೀನುಗಳಲ್ಲಿ ದುಡಿದು ಬಂದನಂತರ ದೇವಾಲಯ, ಊರು ಕಟ್ಟೆ ಮೇಲೆ ಕುಳಿತು ಆಗುಹೋಗುಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ಜಾಗತಿಕ ಅಂತರ ಕಾಯ್ದುಕೊಂಡು ಹರಟೇ ಹೊಡಿಯುತ್ತಾರೆ.
ಹಳ್ಳಿ ಜನಕ್ಕೆ ಇರುವ ಸಂಯಮ ಇನ್ನೂ ಪ್ಯಾಟೆ ಮಂದಿಗೆ ಬಂದಿಲ್ಲಾ ಎಂಬುದು ವಿಪರ್ಯಾಸ ಸಂಗತಿ ಎಂದರೇ ತಪ್ಪೇನಿಲ್ಲ.
Share
WhatsApp
Follow by Email