ಬೆಳಗಾವಿಯಲ್ಲಿ ಮೂವರಿಗೆ ಕೊರೊನಾ ಸೋಂಕು..ಜಿಲ್ಲಾಧಿಕಾರಿಗಳಿಂದ ಬರರಬೇಕಿದೆ ಸ್ಪಷ್ಟನೆ

ಬೆಳಗಾವಿಯಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ ಎಂಬ ಉಹಾಪೋಹಗಳು ಜಿಲ್ಲೆಯಾಧ್ಯಂತ ಕೇಳಿ ಬಂದಿವೆ. ಅಲ್ಲದೇ ಜಿಲ್ಲೆಯ ಮೂರು ಜನರಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದ್ದು. ಇದಕ್ಕೆಲ್ಲಾ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರೇ ಪುಷ್ಠೀಕರಿಸಬೇಕಿದ
ಹೌದು ಈಗ ಬಂದ ಮಾಹಿತಿ ಪ್ರಕಾರ ಬೆಳಗಾವಿ ಕ್ಯಾಂಪ್ ಪ್ರದೇಶ, ಹಿರೇಬಾಗೇವಾಡಿ ಹಾಗೂ ಬೆಳಗುಂದಿಯ ಮೂರು ಜನರಿಗೆ ಕೊರೊನಾ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದ್ದು.
ಅಷ್ಟೇ ಅಲ್ಲದೇ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಮಹಾನಗರ ಪಾಲಿಕೆ, ದಂಡು ಮಂಡಳಿ ಸಿಬ್ಬಂದಿ ಇಡೀ ಪ್ರದೇಶದಲ್ಲಿ ಹೈಪೋ ಕ್ಲೋರೈಡ್ ಸ್ಪ್ರೇ ಸಿಂಪಡಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರತಿ ಮನೆ ಮನೆಗಳ ಮುಂದೆ ಸ್ಪ್ರೇ ಸಿಂಪಡಣೆ ಮಾಡುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಾಗಿದೆ. ಅ ಒಟ್ಟಾರೆ ಬೆಳಗಾವಿಯಲ್ಲಿ ಮೂರು ಜನರಿಗೆ ಕೊರೊನಾ ಪಾಸಿಟಿವ್ ಕುರಿತು ಎದ್ದಿರುವ ಊಹಾಪೋಹಗಳಿಗೆ ಸ್ವತಃ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟೀಕರಣ ನೀಡಬೇಕಿದೆ.
Share