ಶೆಟ್ಟರ್ ಹೇಳಿಕೆ ಸತ್ಯಕ್ಕೆ ದೂರ; ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪಾಜಿಟಿವ್ ಇಲ್ಲ

ಬೆಳಗಾವಿ: ಕೊರೊನಾ ಅಂಕಿಅಂಶಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ಬೆಳಗಿನ ವರದಿ ಬಿಡುಗಡೆಗೊಂಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.
ಇಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು, ಬೆಳಗಾವಿ ಜಿಲ್ಲೆಯ ಮೂವರಲ್ಲಿ ಕೊರೊನಾ ಪಾಜಿಟಿವ್ ಪತ್ತೆಯಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಇಂದು ಮಧ್ಯಾಹ್ನ ೧೨ ಗಂಟೆ ವರೆಗೆ ನಡೆದ ಗಂಟಲು ದ್ರವ ಪರೀಕ್ಷೆಗಳ ವರದಿ ಬಿಡುಗಡೆಗೊಂಡಿದ್ದು, ಅದರ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಈ ಹಿಂದೆ ಕಳಿಸಲಾಗಿದ್ದ ೨೭ ಸ್ಯಾಂಪಲ್ ಗಳ ವರದಿ ಬಂದಿದ್ದು, ಅವು ಎಲ್ಲವೂ ನೆಗೆಟಿವ್ ಆಗಿವೆ. ನಿನ್ನೆ ಕಳಿಸಲಾಗಿರುವ ೩೩ ಸ್ಯಾಂಪಲ್ ಗಳ ವರದಿ ಇನ್ನೂ ಬರಬೇಕಿದೆ.
Share