ಬೆಳಗಾವಿ ಸರ್ಕೀಟ್ ಹೌಸ್‍ನಲ್ಲಿ ಸಚಿವ ಜಗದೀಶ ಶೆಟ್ಟರ್ ತುರ್ತು ಸಭೆ

ಬೆಳಗಾವಿಯ ಸರ್ಕಿಟ್ ಹೌಸ್‍ನಲ್ಲಿ ಶನಿವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದರು.
ದೆಹಲಿಯ ನಿಜಾಮುದ್ದೀನ್ ತಬ್ಲೀಘ ಮರ್ಕೇಜ್‍ಗೆ ಹೋಗಿ ಬಂದ ಮೂವರಲ್ಲಿ ಕೊರೋನಾ ಸೋಂಕು ಪತ್ತೆಯಾದ ಬೆನ್ನಹಿಂದೆಯೇ ಬೆಳಗಾವಿಯಲ್ಲಿ ಆತಂಕ ಶುರುವಾಗಿದೆ. ಬಂದೋಬಸ್ತ್ ಸಹಿತ ಲಾಕ್‍ಡೌನ್ ಇನ್ನಷ್ಟು ಬಿಗಿಯಾಗಿದೆ. ಸಾರ್ವಜನಿಕರು ಸ್ವಯಂ ತಮ್ಮ ನಿವಾಸಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ
ಬೆಳಗಾವಿ ಕೊರೋನಾ ಬೇಗುದಿಯಿಂದ ಬೆಚ್ಚಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತುರ್ತು ಸಭೆ ಕರೆದು ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಶನಿವಾರ ಮಧ್ಯಾಹ್ನ ಸಚಿವ ಜಗದೀಶ ಶೆಟ್ಟರ್ ಸರ್ಕಿಟ್ ಹೌಸ್‍ಗೆ ಆಗಮಿಸಿದರು.
ಸಭೆಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವೆ ಶಶಿಕಲಾ ಜೋಲ್ಲೆ, ಶಾಸಕರು, ಜಿಲ್ಲಾಧಿಕಾರಿ, ಎಸ್ಪಿ, ಪೊಲೀಸ್ ಕಮೀಷನರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ.
Share