ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಚಿಕ್ಕೋಡಿ ಕಾರ್ಖಾನೆಯಿಂದ ಉಚಿತ ಹ್ಯಾಂಡ್ ಸೆನಿಟೈಜರ ವಿತರಣೆ

ಚಿಕ್ಕೋಡಿ :- ಜಗತ್ತಿನಾದ್ಯಂತ ಕರೋನಾ (ಕೋವಿಡ್-19) ಮಹಾಮಾರಿ ರೋಗವು ಹರಡುತ್ತಿದ್ದು, ಕರೋನಾ ರೋಗವನ್ನು ಹೊಡೆದೋಡಿಸಲು ಬೇಕಾಗಿರುವ ಹ್ಯಾಂಡ್ ಸ್ಯಾನಿಟೈಜರ್‍ನ್ನು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಚಿಕ್ಕೋಡಿ ಕಾರ್ಖಾನೆಯಿಂದ
ಉಚಿತ ಹ್ಯಾಂಡ್ ಸೆನಿಟೈಜರ ವಿತರಣೆ ರಾಜ್ಯ ಸಭಾ ಸದಸ್ಯರಾದ ಡಾ|| ಪ್ರಭಾಕರ ಕೋರೆಯವರ ನಿರ್ದೇಶನದಂತೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಅಮಿತ ಕೋರೆ ಮತ್ತು ಆಡಳಿತ ಮಂಡಳಿಯ ಆದೇಶದಂತೆ ಕಾರ್ಖಾನೆಯ ಸುತ್ತಮುತ್ತಲಿನಲ್ಲಿರುವ ಗ್ರಾಮಗಳಾದ ಅಂಕಲಿ, ಯಕ್ಸಂಬಾ, ಸದಲಗಾ, ಕೇರೂರ, ಚಿಕ್ಕೋಡಿ ಊರುಗಳಲ್ಲಿರುವ ಸರಕಾರಿ ಆಸ್ಪತ್ರೆ, ಪೋಲಿಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ ಹಾಗೂ ಇನ್ನೂಳಿದ ಸರಕಾರಿ ಕಚೇರಿಗಳಿಗೆ ಮತ್ತು ಬೆಳಗಾವಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಬೆಳಗಾವಿ ಇನ್‍ಸ್ಟಿಟ್ಯೂಟ್ ಆಫ್ ಮೇಡಿಕಲ್ ಸೈನ್ಸ ಹಾಗೂ ಕೆಎಲ್‍ಇ ಆಸ್ಪತ್ರೆಗೆ ಉಚಿತವಾಗಿ 1ಲೀಟರ್ ಮತ್ತು 5ಲೀಟರ್ ಕ್ಯಾನ್‍ಗಳ ‘ಹ್ಯಾಂಡ್ ಸೆನಿಟೈಜರ್’ ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ಸಂದೀಪ ಪಾಟೀಲ, ನಿರ್ದೇಶಕರುಗಳಾದ ಚೇತನ ಪಾಟೀಲ, ಮಹಾವೀರ ಮಿರ್ಜಿ, ವ್ಯವಸ್ಥಾಪಕ ನಿರ್ದೇಶಕರಾದ ಆರ್. ಟಿ. ದೇಸಾಯಿ ಹಾಗೂ ಕಾರ್ಖಾನೆಯ ವಿಭಾಗಾಧಿಕಾರಿಯವರು ಉಪಸ್ಥಿತರಿದ್ದರು.
Share