ಮೋಡ ಮುಸುಕಿದ ಮತಾಂಧತೆ: ಕೊರೋನಾ ಜಿಹಾದ್

ಪ್ರಸ್ತುತ ದಿನಗಳಲ್ಲಿನ ಸಾಮಾಜಿಕ ಬೆಳವಣಿಗೆ ಗಮನಿಸಿದಾಗ ಈ ಉಸಿರುಗಟ್ಟಿದ ವಾತಾವರಣದಲ್ಲಿ ಕೊರೋನಾ ವೈರಸ್ ವಿರುದ್ಧ ನಡೆದ ಲಾಕ್ ಡೌನ್ ನಡುವೆ ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗಿ ಸ್ತಬ್ಧಗೊಂಡಿದೆ. ಆದರೆ ಕೆಲ ದೇಶದ್ರೋಹಿ ಇಸ್ಲಾಂ ಮತಾಂಧ ಇಚ್ಛಾಶಕ್ತಿಗಳು ಮಾನವ ವಿರೋಧಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ಅಲ್ಲಾಹುವಿಗೆ ಅರ್ಪಿಸಿಕೊಂಡಿದ್ದೇವೆ ಎಂಬ ದುರ್ಬುದ್ಧಿಯಿಂದ ಈ ಸಂದಿಗ್ಧ ಸನ್ನಿವೇಶವನ್ನು ವಿಚಿತ್ರ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ.

ಈ ದೇಶದ ಕಾನೂನು ಹಾಗೂ ಸರ್ಕಾರದ ಅಧಿಕಾರಿಗಳು ಗಮನಿಸುತ್ತಿದ್ದಾರೆಂಬ ಪರಿವೆಯೇ ಇಲ್ಲವೇ? ಅಥವಾ ಒಂದು ಪಕ್ಷದ ಅಧ್ಯಕ್ಷರೇ ಒಂದು ಕೋಮಿಗೆ ಬಹಿರಂಗವಾಗಿ ಬೆಂಬಲಿಸಿ ನೀಡಿದ ಹೇಳಿಕೆ ನೋಡಿದರೆ ಇದರಲ್ಲಿ ಏನೋ ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಇಡೀ ಮಾನವ ಕುಲ ಸಂಕಟಕ್ಕೆ ಸಿಲುಕಿದಾಗ ಯಾವುದೇ ಧರ್ಮ ಅಥವಾ ಧರ್ಮ ಪ್ರತಿನಿಧಿ ಒಳಿತಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೇ ವಿನಃ, ಒಂದು ಇಚ್ಛಾಶಕ್ತಿಗೆ ಪೂರಕವಾಗಿ ಮತ್ತೊಂದು ಧರ್ಮದ ವಿರುದ್ಧ ನಡೆದುಕೊಳ್ಳುವ ಬೆಳವಣಿಗೆ ಅಕ್ಷಮ್ಯ ಅಪರಾಧ. ತಮ್ಮ ಧರ್ಮದ ಬಗ್ಗೆ ಇಡೀ ಮಾನವ ಕುಲ ಅಗೌರವ, ಅಪನಂಬಿಕೆಯಿಂದ ತೋರುವ ಹಾಗೆ ವರ್ತಿಸುತ್ತಿರುವುದು ಖಂಡನೀಯ.
ಈ ರೀತಿಯ ಬಹಿರಂಗ ಕುಕೃತ್ಯಗಳು ಈಗಷ್ಟೇ ಅಲ್ಲ ಮೊದಲಿನಿಂದಲೂ ಮಾನವ ಬಾಂಬ್ ರೀತಿಯ ತರಬೇತಿ ನಡೆಸಿ ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಬಲಿಕೊಟ್ಟು ವಿಕೃತ ನಗೆ ಬೀರಿ ಕೇಕೆಹಾಕಿದ ದುಷ್ಟಶಕ್ತಿಗಳು ಅಂತ್ಯಗಾಣುವುದು ಕೂಡಾ ಅಷ್ಟೇ ದುರ್ಗತಿಯಲ್ಲಿ ಎಂಬುದು ಮನಗಾಣಬೇಕಿದೆ.

ಧರ್ಮದ ಅಮಲು ಇಷ್ಟೊಂದು ಅತಿರೇಕಕ್ಕೆ ತಲುಪಿದಾಗ ಅದರ ಕರ್ಮದ ಫಲವೂ ಅಷ್ಟೇ ಭೀಕರವಾಗಿರುವುದು ಎಂದೂ ಭಾವಿಸಬೇಕಿದೆ. ಯಾವುದೇ ಒಂದು ಇಚ್ಛಾಶಕ್ತಿಯ ಒಳ್ಳೆಯ ಅಥವಾ ಕೆಟ್ಟ ಉದ್ದೇಶದ ಯೋಜಿತ ಕಾರ್ಯ ತದನಂತರ ಚಟುವಟಿಕೆಗಳಾಗಿ ಪರಿವರ್ತಿತವಾಗಿ ಸಮಾಜಕ್ಕೆ ದುಷ್ಪರಿಣಾಮ ಬೀರುತ್ತಾ ಹೋದಹಾಗೆ ಮೂಲ ಇಚ್ಛಾಶಕ್ತಿ ಬೆನ್ನಹತ್ತಿ ಸರ್ಕಾರದ ಅಧಿಕಾರಿವರ್ಗ ಅದನ್ನು ಭೇದಿಸಿ ಸದೆಬಡೆದು ಸೂಕ್ತ ಕ್ರಮ ಜರುಗಿಸಿದಾಗ ಅದರ ಅವಧಿ ಅಂತ್ಯವಾಗಲಿದೆ. ಒಂದುವೇಳೆ ಒಳ್ಳೆಯ ಕಾರ್ಯಗಳಾಗಿದ್ದರೆ ಸಮಾಜಕ್ಕೆ ಒಳಿತಾಗುವ ಯೋಜನೆ, ಚಟುವಟಿಕೆಗಳಾಗಿದ್ದರೆ ಯಾವುದೇ ಧರ್ಮವಾಗಲೀ, ಇಚ್ಛಾಶಕ್ತಿಯಾಗಲೀ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ.

ಒಟ್ಟಾರೆಯಾಗಿ ಅವಲೋಕನ ಮಾಡಿದರೆ ಈ ಇಸ್ಲಾಂ ಧರ್ಮದ ಕೆಲ ಪ್ರಸಾರಕ ಇಚ್ಛಾಶಕ್ತಿಗಳು ನಡೆಸುವ ಹುನ್ನಾರಗಳು ಹಾಗೂ ಇಸ್ಲಾಂಮೇತರ ಧರ್ಮದ ನಾಶಕ್ಕೆ ಕಾರಣವಾಗುವ ಕುಕೃತ್ಯಗಳು ಇಡೀ ಮಾನವ ಕುಲದ ವಿರೋಧಿಯಾಗಿವೆ. ಈ ಬೆಳವಣಿಗೆ ಅಕ್ಷಮ್ಯ ಅಪರಾಧ. ಈ ರೀತಿಯ ಇಚ್ಛಾಶಕ್ತಿ ವಿರುದ್ಧ ಭಾರತ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿ ಶಿಕ್ಷೆ ನೀಡದಲ್ಲಿ ಆಡಳಿತ ಇಚ್ಛಾಶಕ್ತಿ ಮೇಲೆ ಗೌರವ ಹಾಗೂ ನಂಬಿಕೆ ಉಳಿಯಲಿದೆ. ಇಲ್ಲವಾದರೆ ಈ ರೀತಿಯ ಕುಕೃತ್ಯಗಳು ಇನ್ನಷ್ಟು ಉಲ್ಬಣಿಸಲಿವೆ.

  • ವೀರೇಶ್ ಎ.ನಾಡಗೌಡರ್
    ಪ್ರಧಾನ ಸಂಪಾದಕ, ಕನ್ನಡ ಟುಡೆ ನ್ಯೂಸ್.
    Email: kannadatoday@gmail.com
Share