ಅಥಣಿಯಲ್ಲಿ ಕೊರೊನಾ ಇಲ್ಲ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸಿ ಎಸ್ ಪಾಟೀಲ ಸ್ಪಷ್ಟನೆ

ಅಥಣಿ:ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೊವಿಡ್ 19 ಮಹಿಳಾ ರೋಗಿಗೆ ಚಿಕಿತ್ಸೆ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯಾಧಿಕಾರಿಗಳು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನಿಜವಾಗಿದ್ದು ಅಲ್ಲ.
ಅದು ಪೂರ್ವ ಸಿದ್ದತೆಯ ಡೆಮೊ ವಿಡಿಯೋ ಆಗಿದ್ದು ಸಾರ್ವಜನಿಕರು ಅದನ್ನು ತಪ್ಪಾಗಿ ಅರ್ಥೈಸಬಾರದು.
ಅನಗತ್ಯವಾಗಿ ಜನರು ವಿಡಿಯೋ ವೈರಲ್ ಮಾಡಿ ಸಮಸ್ಯೆ ಉದ್ಭವಿಸುವಂತೆ ಮತ್ತು ಸಾರ್ವಜನಿಕರರಲ್ಲಿ ಭಯ ಉಂಟು ಮಾಡಬಾರದು ಎಂದು ಅಥಣಿ ವೈದ್ಯಾಧಿಕಾರಿ ಸಿ ಎಸ್ ಪಾಟೀಲ ಮನವಿ ಮಾಡಿದ್ದಾರೆ.
ಚಿಕಿತ್ಸೆಯ ಡೆಮೊ ವಿಡಿಯೋ ನೋಡಿ ನಿಜವಾದ ಕೊರೊನಾ ರೋಗಿ ಎಂದು ಬೆಸ್ತು ಬಿದ್ದ ಅಥಣಿ ತಾಲೂಕಿನ ಜನರು ಕೊರೊನಾ ಕುರಿತು ಜಾಗೃತಿ ವಹಿಸಬೇಕು ಎಂದು ಮತ್ತು ಅಥಣಿ ಆಸ್ಪತ್ರೆಯಲ್ಲಿ ಇರುವ ಚಿಕಿತ್ಸಾ ಸೌಲಭ್ಯದ ಕುರಿತಾದ ವಿಡಿಯೋವನ್ನು ತಪ್ಪು ಭಾವಿಸಕೂಡದು ಎಂದು ಮನವಿ ಮಾಡಿದರು.
ಈ ವೇಳೆ ಅಥಣಿ ತಾಲ್ಲೂಕು ವೈದ್ಯಾಧಿಕಾರಿ ಡಾ ಕೊಪ್ಪದ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಮತ್ತು ಡೆಮೊನಲ್ಲಿ ಭಾಗವಹಿಸಿದ ಹಮೀದಾ ಕೊರಬು ಉಪಸ್ಥಿತರಿದ್ದರು
Share