ಬ್ರೇಕಿಂಗ್ ನ್ಯೂಸ್

ತುಕ್ಕಾನಟ್ಟಿ : ಬಿಸಿಯೂಟದ ಆಹಾಧಾನ್ಯಗಳ ವಿತರಣೆ

ಮೂಡಲಗಿ: ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಆಹಾರಧಾನ್ಯಗಳನ್ನು ವಿತರಿಸಲಾಯಿತು.
ಕೊರೊನಾ ವೈರಸ್ ಸೋಂಕಿನಿoದಾಗಿ ರಾಜ್ಯದಲ್ಲಿ ಲಾಕಡೌನ ಘೋಷಣೆಯಾದ ಕಾರಣ, ಶಾಲೆಗಳಿಗೆ ಡಿಡೀರ ರಜೆ ಘೋಷಣೆಯಾದ ಸಂದರ್ಭದಲ್ಲಿ ಅಕ್ಷರದಾಸೋಹದ ಮದ್ಯಾಹ್ನದ ಬಿಸಿಯೂಟ ನಂಬಿಕೊoಡಿದ್ದ ಎಷ್ಟೋ ಬಡವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸರ್ಕಾರ, ಮಾರ್ಚ 14 ರಿಂದ ಎಪ್ರೀಲ್ 10ರ ವರೆಗಿನ 21 ದಿನಗಳ ಕಾಲದ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಪಾಲಕರಿಗೆ ವಿತರಿಸಲು ಆದೇಶಿಸಿದ ಕಾರಣ, ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಸುಮಾರು 700 ವಿದ್ಯಾರ್ಥಿಗಳ ಪಾಲಕರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಈ ಸಂರ್ದಭದಲ್ಲಿ ಮುಖ್ಯ ಗುರುಗಳಾದ ಎಸ್.ವ್ಹಿ.ಗಿರೆಣ್ಣವರರವರು ಮಾತನಾಡಿ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ನೀಡಿ, ಎಲ್ಲರೂ ಮಾಸ್ಕ ಧರಿಸಬೇಕಲ್ಲದೆ, ಯಾರೂ ಮನೆಯಿಂದ ಹೊರಗೆ ಬರದೆ ಮನೆಯಲ್ಲಿದ್ದುಕೊಂಡು ಕೊರೊನಾ ಬರದಂತೆ ಕಾಪಾಡಿಕೊಳ್ಳುವದರ ಮುಖಾಂತರ ಸರ್ಕಾರಿ ಆಧೇಶವನ್ನು ಪಾಲಿಸಬೇಕೆಂದು ಹೇಳಿದರು.
ವಿಮಲಾಕ್ಷಿ ತೋರಗಲ್, ಮಂಜುನಾಥ ಕಮ್ಮಾರ, ಕುಸುಮಾ ಚಿಗರಿ, ರೂಪಾ ಗದಾಡಿ ಹಾಗೂ ಅಕ್ಷರ ದಾಸೋಹದ ಸಿಬ್ಬಂಧಿ ಪಾಲ್ಗೊಂಡಿದ್ದರು

About the author

admin