ಮಹಿಳೆಗೆ ರಸ್ತೆ ಮಾರ್ಗಮಧ್ಯದಲ್ಲಿ ಹೆರಿಗೆ

ಮಹಾಲಿಂಗಪುರ : ಸಮೀಪದ ಸೈದಾಪೂರ ಗ್ರಾಮ ಪಂಚಾಯತ ವ್ಯಾಪ್ತಿಯ ಮಹಿಳೆಯೋರ್ವಳಿಗೆ ಆಸ್ಪತ್ರೆಯ ಮಾರ್ಗ ಮಧ್ಯದಲ್ಲಿ ಹೆರಿಗೆಯಾದ ಪ್ರಸಂಗ ನಡೆದಿದೆ.
ಗ್ರಾಮದ ಮಂಜುಳಾ ಮುತ್ತಪ್ಪ ಬಿಡಾಯಿ (22) ಹೆರಿಗೆ ಬೇನೆ ಹೆಚ್ಚಾದ ಕಾರಣ ಸಮೀಪದ 108 ಆಂಬ್ಯುಲೆನ್ಸ್ ಗೆ ಫೋನ್ ಹಚ್ಚಲಾಗಿ ಸರಿಯಾದ ಸಮಯಕ್ಕೆ ಬಾರದ ಕಾರಣ ಪತಿ ತನ್ನ ಮೋಟರ್ ಬೈಕ್ ಮೇಲೆ ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ಸಂದರ್ಭದಲ್ಲಿ ಸಮೀರ್ವಾಡಿ ಫ್ಯಾಕ್ಟರಿ ಕ್ರಾಸ್ ಹತ್ತಿರ ಸಾಯಂಕಾಲ 7.30ಕ್ಕೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ತಡವಾಗಿ ಆಗಮಿಸಿದ ಆಂಬುಲೆನ್ಸ್ ನೊಂದಿಗೆ ಆಸ್ಪತ್ರೆಗೆ ಮಗು ಹಾಗೂ ತಾಯಿಯನ್ನು ಕರೆತರಲಾಗಿದ್ದು, ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಗುರುನಾಥ ಕಗಲ್ಗೊಂಬ್ ತಿಳಿಸಿದ್ದಾರೆ