ಮುದ್ದೇಬಿಹಾಳ್ : ಚೇಕ್ ಪೋಸ್ಟ್ ಗೆ ತಹಶಿಲ್ದಾರ ಜಿ ಎಸ್ ಮಳಗಿ, ಸಿಪಿಐ ಆನಂದ ವಾಗ್ಮೋರೆ ಸೋಮವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು

ಮುದ್ದೇಬಿಹಾಳ: ಕೊರೊನಾ ಲಾಕ್ ಡೌನ ವೇಳೆ ಹೊರ ರಾಜ್ಯ ಜಿಲ್ಲೇಗಳಿಂದ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ ಹಿನ್ನೇಲೆಯಲ್ಲಿ ತಾಲೂಕಿನ ತಂಗಡಗಿ ಹೊರವಲಯದಲ್ಲಿರುವ ನೀಲಮ್ಮನ ದೇವಸ್ಥಾನದ ಹತ್ತಿರ ನಿರ್ಮಿಸಲಾಗಿರುವ ಚೇಕ್ ಪೋಸ್ಟ್ ಗೆ ತಹಶಿಲ್ದಾರ ಜಿ ಎಸ್ ಮಳಗಿ, ಸಿಪಿಐ ಆನಂದ ವಾಗ್ಮೋರೆ ಸೋಮವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ಲಾಕ್ ಡೌನ ಆದೇಸಿಸಿ ಇತರೇ ಜಿಲ್ಲೇಗಳಿಂದ ನಮ್ಮ ಜಿಲ್ಲೇಗೆ ಬರುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಂದ ಸೂಚನೆ ಇದೇ.ಕಾರಣ ಯಾರೇ ಆಗಿರಲಿ ಅವರನ್ನು ಮೊದಲು ಆರೋಗ್ಯ ತಪಾಸಣೆ ಮಾಡುವುದು ಹಾಗೂ ಸೊಂಕಿನ ಗುಣಲಕ್ಷಣಗಳ ಬಗ್ಗೆ ನಮ್ಮ ತಾಲೂಕಿಗೆ ಬರುವವರ ಮೇಲೆ ತೀವೃ ನಿಗಾವಹಿಸಿ ಒಂದು ವೇಳೆ ನಿರ್ಲಕ್ಷವಹಿಸಿದರೇ ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚೆಕ್ ಪೋಸ್ಟ್ ತಪಾಸಣಾ ಸಿಬ್ಬಂದಿಗಳಿಗೆ ಸ್ರಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋರೋನಾ ವೈರಸ್ ಹರಡುವಿಕೆಯ ಸಂಖ್ಯೆ ದಿನದಿಂದಕ್ಕೆ ಏರುತ್ತಲೇ ಇದೇ ಆದರೇ ಇಲ್ಲಿಯತನಕ ಮುದ್ದೇಬಿಹಾಳ ತಾಲೂಕಿನಲ್ಲಿ ಸೋಂಕಿತ ಪ್ರಕರಣಗಳು ಕಂಡು ಬಂದಿಲ್ಲ ಎಂಬುದು ಸಂತೋಷದ ವಿಷಯ ಆದರೇ ಸ್ವಲ್ಪ ಎಚ್ಚರ ತಪ್ಪಿದರೇ ಪರಿಸ್ಥಿತಿ ತುಂಬಾ ಗಂಭಿರವಾಗುವ ಸಾಧ್ಯತೆ ಇದೇ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನ ಹೊರ ವಲಯದಲ್ಲಿರುವ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಎಲ್ಲ ಸೌಲಭ್ಯ ಉಳ್ಳ ನುರಿತ ಆರೋಗ್ಯ ಸಿಬ್ಬಂದಿ ಜೊತೆಗೆ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗಿದೆ.ಬೇರೆ ಭಾಗಗಳಿಂದ ತಾಲೂಕಿಗೆ ಬರುವವರ ಸಂಖ್ಯೆಯೂ ಕೂಡ ಗಣನಿಯವಾಗಿ ಮುಂದುವರೆದಿದೆ.
ಹಾಗೊoದು ವೇಳೆ ಅಂತರ ರಾಜ್ಯ, ಜಿಲ್ಲೇಗಳಿಂದ ತಾಲೂಕಿಗೆ ಬಂದವರ ಸಂಪೂರ್ಣ ಮಾಹಿತಿ ಪಡೆದು ಅವರ ಬಳಿ ಹೋಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ 14 ದಿನಗಳವರೆಗೆ ಕ್ವಾರಂಟೆನ್ ಡೆ ಪ್ರಕಾರ ಮನೆ ಬಿಟ್ಟು ಬರದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಒಬ್ಬರಿಂದ ಇನ್ನೋಬ್ಬರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ.
ಅದರಂತೆ ಬಾಗಲಕೋಟ ಜಿಲ್ಲೇಯಲ್ಲಿ ಸಧ್ಯ ನಾಲ್ಕು ಪ್ರಕರಣಗಳು ಕೇಳಿಬರುತ್ತಿರುವ ಹಿನ್ನೇಲ್ಲಿ ಹುನಗುಂದ ತಾಲುಕಿನಿಂದ ಮುದ್ದೇಬಿಹಾಳ ಪಟ್ಟಣದಲ್ಲಿ ಮಾರಾಟ ಮಾಡಲು ತಂದಿರುವ ತರಕಾರಿಯನ್ನು ತಾಲುಕಿನ ಒಳಗೆ ಪಡೆದುಕೊಳ್ಳುವುದನ್ನು ನಿಷೇಧಿಸಿದೆ. ಹಾಗಾಗಿ ನಮ್ಮ ಜಿಲ್ಲೇಯ ನಮ್ಮ ತಾಲೂಕಿನನಲ್ಲಿಯೇ ಸಾಷ್ಟು ಜನ ರೈತರು ತರಕಾರಿ ಬೆಳೆದಿದ್ದಾರೆ ಅವರಿಗೆ ತೊಂದರೆಯಾಗಬಾರದು ಕಾರಣ ಹುನಗುಂದ ಜಿಲ್ಲೇ ಸ್ಭೆರಿದಂತೆ ಇತರೇ ಜಿಲ್ಲೇಯವರು ತಮ್ಮ ಊರು ಗ್ರಾಮ, ಪಟ್ಟಣಗಳಲ್ಲಿ ತಾವು ಬೇಳೆದ ತರಕಾರಿ ಮಾಡಬಹುದು. ನಮ್ಮ ಮಾರಾಟ ಮಾಡುವಂತಿಲ್ಲ.
ಹಾಗೊoದು ವೇಳೆ ನಿಯಮ ಮೀರಿ ತಾಲೂಕಿನೊಳಗೆ ಬೇರೆ ಜಿಲ್ಲೇಯ ತರಕಾರಿ ಮಾಲುಗಳು ಪತ್ತೇಯಾದರೇ ಖಂಡಿತ ಸುಮ್ಮನಿರಲ್ಲ. ವಾಹನ ಸಮೇತ ತರಕಾರಿಯನ್ನು ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಸ್ಭೆರಿದಂತೆ ವಿವಿಧ ಸಿಬ್ಬಂದಿಗಳು ಇದ್ದರು
Share