ವಿಶ್ವದಾದ್ಯಂತ ವಿಷ ವೈರಾನು ಹರಡುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ನಾವೇಲ್ಲ ಜಾಗೃತಗೊಳ್ಳ ಬೇಕು : ಭೀಮಶಿ ಮಗದುಮ್

ಮೂಡಲಗಿ: ಕರೋನಾ ಮಹಾಮಾರಿಗೆ ಜನ ತತ್ತರಗೊಂಡಿದ್ದು, ದುಡಿಮೆ ಇಲ್ಲದೆ ಜನ ಕಂಗಾಲಾಗಿದ್ದು, ಹಣಕಾಸಿಕ ತೊಂದರೆಗೆ ಸಿಲುಕುವಂತಾಗಿದೆ. ವಿಶ್ವದಾದ್ಯಂತ ವಿಷ ವೈರಾನು ಹರಡುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ನಾವೇಲ್ಲ ಜಾಗೃತಗೊಳ್ಳ ಬೇಕು ಎಂದು ತಾಲೂಕಾ ಭೂ ನ್ಯಾಯ ಮಂಡಳಿ ನಿರ್ಧೇಶಕ ಮಾಜಿ ಜಿ.ಪಂ ಸದಸ್ಯ ಭೀಮಶಿ ಮಗದುಮ್ ಹೇಳಿದರು.
ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಕರೋನ್ ನಿಮಿತ್ಯ ಲಾಕ್ ಡೌನ್ ಹಿನ್ನೆಲೆ ಅಗತ್ಯ ತರಕಾರಿ ಕಾಯಿಪಲ್ಲೆ ವಿತರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಜನತೆಗೆ ತೊಂದರೆಗೆ ಒಳಗಾಗದೆ ಗ್ರಾಮ ಪಂಚಾಯತ ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಅಗತ್ಯ ಸಲಹೆ ಪಾಲಿಸಬೇಕು. ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಯಾದರು ಜೀವಕ್ಕಿಂತ ಹೆಚ್ಚಿನದಿಲ್ಲ. ಪ್ರಧಾನಿಯವರು ನೀಡಿರುವ ಸಲಹೆ ಸೂಚನೆಗಳನ್ನು ಎಲ್ಲರು ಪಾಲಿಸಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಕತ್ತಿ, ಬಾಹುಬಲಿ ಸಪ್ತಸಾಗರ, ಸದಾಶಿವ ಮಾವರಕರ, ಗ್ರಾಮಸ್ಥರಾದ ಚಂದ್ರಶೇಖರ ಸಪ್ತಸಾಗರ, ಶಂಕರ ಕುಲಿಗುಡ, ಗಜು ಮಿರ್ಜಿ, ಚನ್ನಪ್ಪ ಬೆಳಗಲಿ, ಬಸು ಹೊಸಮನಿ, ನಾರಾಯಣ ಪೂಜೇರಿ, ಸಚಿನ್ ಕೊಹಳ್ಳಿ ಮತ್ತಿತರರು ಉಪಸ್ಥಿತರಿದ್ದರು
Share