ಬ್ರೇಕಿಂಗ್ ನ್ಯೂಸ್

ಕೊರೊನಾ ಜಾಗತಿಕ ವ್ಯಾಧಿಯಾಗಿ ಹಬ್ಬಿತ್ತಿರುವ ಹಿನ್ನಲೆಯಲ್ಲಿ ಎಲ್ಲ ಶಾಸಕ ಸಚಿವರು ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೆವೆ : ಸಚಿವ ರಮೇಶ್

ಅಥಣಿ: ಬೆಳಗಾವಿ ಜಿಲ್ಲೆಯಲ್ಲಿ ಏಳು ಕೊರೊನಾ ರೋಗಿಗಳ ವರದಿ ಪಾಜಿಟಿವ್ ಬಂದ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ
ಪ್ರವಾಸಿ ಮಂದಿರದಲ್ಲಿ ಜಲಸಂಪನ್ಮೂಲ ಸಚೀವ ರಮೇಶ ಜಾರಕಿಹೋಳಿ ಅಧಿಕಾರಿಗಳ ಸಭೆ ನಡೆಸಿ
ಅಥಣಿ ತಾಲೂಕಿನ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೈದ್ಯಕೀಯ. ಪೋಲಿಸ್ ಮತ್ತು ಪೌರಾಡಳಿತ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಬೆಳಗಾವಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಯ ಡ್ಯಾನ್ಸ ಕುರಿತು ಮಾತನಾಡಿ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತ ಖುಷಿಯಿಂದ ಕುಣಿದಿದ್ದಾನೆ ಅದಕ್ಕೆ ಬೇರೆ ಅರ್ಥಕಲ್ಪಿಸಬೇಕಿಲ್ಲ ಅಲ್ಲದೆ
ಜಿಲ್ಲೆಯ ಉಸ್ತುವಾರಿ ನೋಡಲು ಜಗದೀಶ್ ಶೆಟ್ಟರ್ ಬರಬೇಕು ಅಂತೇನೂ ಇಲ್ಲ. ಕೊರೊನಾ ಜಾಗತಿಕ ವ್ಯಾಧಿಯಾಗಿ ಹಬ್ಬಿತ್ತಿರುವ ಹಿನ್ನಲೆಯಲ್ಲಿ ಎಲ್ಲ ಶಾಸಕ ಸಚೀವರು ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೆವೆ ಎಂದರು.

ಅಥಣಿ ತಾಲ್ಲೂಕು ಅಧಿಕಾರಿಗಳ ಸಭೆಯ ಬಳಿಕ ಕೊರೊನಾ ಕಟ್ಟೆಚ್ಚರಕ್ಕೆ ಖಡಕ್ ಸೂಚನೆ ನೀಡಿ ಸರ್ಕಾರದ ಆದೇಶ ಪಾಲಿಸುವಂತೆ ಮತ್ತು ಸಾರ್ವಜನಿಕರು ಎಲ್ಲ ಇಲಾಖೆಯ ಅಧಿಕಾರಿಗಳ ಜೊತೆ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಅಥಣಿ ಶಾಸಕ ಮಹೇಶ ಕುಮಠಳ್ಳಿ. ತಾಲ್ಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ. ಸಿಪಿಐ ಶಂಕರಗೌಡ ಬಸನಗೌಡರ. ಆಹಾರ ಇಲಾಖೆಯ ಎಮ್ ವಿ ಬಿರಾದಾರ. ಉಪ ತಹಶಿಲ್ದಾರ ಆರ್ ಆರ್ ಬುರ್ಲಿ. ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಸಿ ಎಸ್ ಪಾಟೀಲ. ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಾದ ವೀರಣ್ಣ ವಾಲಿ. ಜಿ ಡಿ ಗುಂಡ್ಲೂರ. ತಮ್ಮಣ್ಣ ಕಲಾಟೆ. ಎಮ್ ಎಮ್ ಮಿರ್ಜಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು

About the author

admin