ಬ್ರೇಕಿಂಗ್ ನ್ಯೂಸ್

ಚಿಕ್ಕೋಡಿ ಬಿಜೆಪಿ ಕಚೇರಿ ಮುಂದೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಿದರು

ಚಿಕ್ಕೋಡಿ: ಬಿಜೆಪಿ ಸಂಸ್ಥಾಪನಾ ದಿನವನ್ನು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಇವತ್ತು ಮಧ್ಯಾಹ್ನ ೧೨ ಗಂಟೆಗೆ ಚಿಕ್ಕೋಡಿ   ಬಿಜೆಪಿ  ಕಚೇರಿ ಮುಂದೆ ಬಿಜೆಪಿ  ಧ್ವಜ ಹಾರಿಸುವ ಮೂಲಕ  ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಿದರು.
ಬಳಿಕ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಸಮಾಜ ಸೇವೆಯೇ ದೇವರ ಸೇವೆ ಎಂದು ಬಿಜೆಪಿ ಪಕ್ಷ ಹುಟ್ಟಿಕೊಂಡು ಇಂದು ಭಾರತ ದೇಶವನ್ನು ಎತ್ತರಕ್ಕೆ ಕೊಂಡೊಯಲು ಸಾಧ್ಯವಾಗಿದೆ. ಎಲ್ಲಾ ಕಾರ್ಯಕರ್ತರ ಶ್ರಮ ಹಾಗೂ ನಾಯಕರ ಪ್ರೊತ್ಸಾಹದಿಂದ ಬಿಜೆಪಿ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ. ಹೀಗಾಗಿ ಕೊರೊನಾ ವೈರಸ್ ಹಿನ್ನಲ್ಲೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಸರಳವಾಗಿ ಆಚರಿಸಲಾಗಿದೆ ಎಂದರು.
ಇಂದು ಬೆಳಿಗ್ಗೆ ಯಕ್ಸಂಬಾದ ತಮ್ಮ ನಿವಾಸದಲ್ಲಿ ಮತ್ತು ಮಧ್ಯಾಹ್ನ ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಸಂಜು ಅರಗೆ, ಸಂಜಯ ಅಡಕೆ ಇದ್ದರು.

About the author

admin